ಕರಾವಳಿ

ಚಾಟ್ ಪ್ರೀಯರಿಗೆ ಭರ್ಜರಿ ಗಿಪ್ಟ್ ನೀಡಿದ ಫೇಸ್‍ಬುಕ್

Pinterest LinkedIn Tumblr

facebook_video_chat

ವಿಶ್ವದ ಅತಿ ದೊಡ್ಡ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಫೇಸ್ಬುಕ್, ಭಾರತೀಯರಿಗೆ ಭರ್ಜರಿ ಗಿಫ್ಟ್ ನೀಡಿದೆ. ಲೈವ್ ವಿಡಿಯೋ ಸೌಲಭ್ಯವನ್ನು ಭಾರತೀಯ ಬಳಕೆದಾರರಿಗೆ ನೀಡಿದೆ. ಐಒಸಿ ಹಾಗೂ ಆಂಡ್ರಾಯ್ಡ್ ಅಪ್ಲಿಕೇಷನ್ ನಲ್ಲಿ ಇದು ಲಭ್ಯವಿದೆ. ಈ ಹಿಂದೆ ಫೇಸ್ಬುಕ್ ಲೈವ್ ವಿಡಿಯೋ ಸೌಲಭ್ಯ ಆಯ್ದ ದೇಶಗಳಲ್ಲಿ ಮಾತ್ರ ಲಭ್ಯವಿತ್ತು.

ಆಂಡ್ರಾಯ್ಡ್ ಬಳಕೆದಾರರು ಫೇಸ್ಬುಕ್ ಅಪ್ಲಿಕೇಷನ್ ತೆರೆಯುತ್ತಿದ್ದಂತೆ ಲೈವ್ ವಿಡಿಯೋ ಐಕಾನ್ ನೋಡಬಹುದಾಗಿದೆ. ಸ್ಟೇಟಸ್ ಬಾಕ್ಸ್ ಕೆಳಗೆ ಐಕನ್ ನೀಡಲಾಗಿದೆ. ಫೋಟೋ ಅಪ್ಲಿಕೇಷನ್ ಪಕ್ಕದಲ್ಲಿಯೇ ಇದು ಲಭ್ಯವಿದೆ. ಐಒಸಿ ಬಳಕೆದಾರರು ಪ್ರತ್ಯೇಕ ಬಾಕ್ಸ್ ಕ್ಲಿಕ್ ಮಾಡಬೇಕಾಗುತ್ತದೆ. ಅಲ್ಲಿ ಲೈವ್ ವಿಡಿಯೋ ಐಕಾನ್ ಕಾಣಸಿಗುತ್ತದೆ.

ಈ ಸೌಲಭ್ಯದಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ವಿಡಿಯೋವನ್ನು ಲೈವ್ ಟೆಲಿಕಾಸ್ಟ್ ಮಾಡಬಹುದಾಗಿದೆ.

ಸಾಮಾನ್ಯ ಬಳಕೆದಾರರು ಇದನ್ನು ಬಳಸಬಹುದಾಗಿದೆ. ನಾಲ್ಕು ಗಂಟೆಗಳ ಕಾಲ ಲೈವ್ ವಿಡಿಯೋ ಟೆಲಿಕಾಸ್ಟ್ ಮಾಡುವ ಅವಕಾಶವನ್ನು ಫೇಸ್ಬುಕ್, ಬಳಕೆದಾರರಿಗೆ ನೀಡಿದೆ.

ಸದಾ ಫೇಸ್ಬುಕ್ ನಲ್ಲಿ ಫೋಟೋ ನೋಡ್ತಾ, ಕಮೆಂಟ್ ಮಾಡ್ತಾ ಇರುವವರು ಇನ್ಮುಂದೆ ಲೈವ್ ವಿಡಿಯೋ ಟೆಲಿಕಾಸ್ಟ್ ಮಾಡ್ತಾ, ಲೈವ್ ಕಮೆಂಟ್ ಮಾಡ್ತಾ ಕಾಲ ಕಳೆಯೋದ್ರಲ್ಲಿ ಎರಡು ಮಾತಿಲ್ಲ.

Comments are closed.