
ನವದೆಹಲಿ: ಎಎಪಿ ಸೇರಲು ಮುಂದಾಗಿದ್ದ ಬಿಜೆಪಿಯ ಮಾಜಿ ಸಂಸದ ನವಜೋತ್ ಸಿಂಗ್ ಸಿದ್ದು, ತಮ್ಮ ನಿರ್ಧಾರ ಬದಲಿಸುವ ಎಲ್ಲಾ ಸಾಧ್ಯತೆಗಳೂ ಇವೆ. ಆಪ್ ಸೇರ್ಪಡೆಯ ನಿರ್ಧಾರವನ್ನು ಸದ್ಯಕ್ಕೆ ಅವರು ತಡೆಹಿಡಿದಿದ್ದಾರೆ.
ಜುಲೈ 18ರಂದು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿದ್ಧು, ಆ.14 ರಂದು ಎಎಪಿ ಸೇರಲು ಮುಂದಾಗಿದ್ದರು. ಪಂಜಾಬ್ನಿಂದ ದೂರವಿರುವಂತೆ ಸೂಚಿಸಿದ್ದರಿಂದ ಬಿಜೆಪಿ ತೊರೆದಿದ್ದಾಗಿ ಸಿದ್ಧು ಹೇಳಿಕೊಂಡಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕೂಡ ಪಕ್ಷ ಸೇರುವಂತೆ ಅವರನ್ನು ಆಹ್ವಾನಿಸಿತ್ತು. ಬಿಜೆಪಿ ತೊರೆದ ಸಿದ್ದು ನಿರ್ಧಾರವನ್ನು ಕೇಜ್ರಿವಾಲ ಸ್ವಾಗತಿಸಿದ್ದರು. ಬಳಿಕ ಎಎಪಿ ಸೇರಲು ತೀರ್ಮಾನಿಸಿದ್ದ ಸಿದ್ದು, ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಸಿಎಂ ಅಭ್ಯರ್ಥಿಯಾಗಿ ಬಿಂಬಿಸುವಂತೆ ಹಾಗೂ ಪತ್ನಿ ನವಜೋತ್ ಕೌರ್ ಸಿದ್ಧುಗೆ ಟಿಕೆಟ್ ನೀಡುವಂತೆ ಆಪ್ ಹೈಕಮಾಂಡ್ ಎದುರು ಬೇಡಿಕೆ ಇಟ್ಟಿದ್ದರು.
ಆದರೆ ಇದಕ್ಕೆ ಎಎಪಿಯ ಕೆಲ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿದ್ಧು ಅವರನ್ನು ಸ್ಟಾರ್ ಕ್ಯಾಂಪೇನರ್ ಆಗಿ ಮಾತ್ರ ಬಳಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಎಪಿ ಸೇರುವ ತನ್ನ ನಿರ್ಧಾರದಿಂದ ಸಿದ್ಧು ಹಿಂದೆ ಸರಿಯಲು ಮುಂದಾಗಿದ್ದಾರೆ ಎನ್ನಲಾಗಿದೆ.
Comments are closed.