ಅಂತರಾಷ್ಟ್ರೀಯ

ಮರ್ಯಾದೆಗಾಗಿ 14 ವರ್ಷ ಹಿಂದೆ ಮೊದಲ ಪತ್ನಿ ಹತ್ಯೆ, ಇದೀಗ 2ನೇ ಪತ್ನಿಯನ್ನು ಹತ್ಯೆಗೈದ ಪತಿ

Pinterest LinkedIn Tumblr

honour-killಕರಾಚಿ: ಪಾಕಿಸ್ತಾನದಲ್ಲಿ ಪತಿಮಹಾಶಯನೊಬ್ಬ ಕುಟುಂಬ ಮರ್ಯಾದೆಗಾಗಿ 14 ವರ್ಷಗಳ ಹಿಂದೆ ಮೊದಲ ಪತ್ನಿಯನ್ನು ಹತ್ಯೆ ಮಾಡಿದ್ದು ಇದೀಗ ಎರಡನೇ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

35 ವರ್ಷದ ಮೂರು ಮಕ್ಕಳ ತಾಯಿ ಫರ್ಝಾನಾ ಎಂಬುವರನ್ನು ಪತಿ ರಹೀಮ್ ದಾದ್ ಕಳೆದ ರಾತ್ರಿ ಮನೆಯಲ್ಲಿ ಆಕೆಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಹಿರಿಯ ಅಧೀಕ್ಷಕ ಅಖ್ತರ್ ಫಾರೂಕ್ ಅವರು ತಿಳಿಸಿದ್ದಾರೆ.

ಫರ್ಝಾನಾಳನ್ನು ಹೊಟ್ಟೆಗೆ ಚಾಕುವಿನಿಂದ ಚುಚ್ಚಿದ ರಹೀಮ್ ಬಳಿಕ ಆಕೆಯ ಕತ್ತು ಸೀಳಿದ್ದು ಹತ್ಯೆ ಬಳಿಕ ಆರೋಪಿ ರಹೀಮ್ ದಾದ್ ನನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಗೆ ಬಳಸಿದ್ದ ಚಾಕುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ವೇಳೆ ಪತ್ನಿಯನ್ನು ಕುಟುಂಬ ಮರ್ಯಾದೆಗಾಗಿ ಹತ್ಯೆ ಮಾಡಿರುವುದಾಗಿ ರಹೀಮ್ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪತ್ನಿ ಫರ್ಝಾನಾ ನನ್ನನ್ನು ತೊರೆಯಲು ತೀರ್ಮಾನಿಸಿದ್ದರಿಂದ ಕುಟುಂಬ ಮರ್ಯಾದೆಗಾಗಿ ಪತ್ನಿಯನ್ನು ಹತ್ಯೆ ಮಾಡಿರುವುದಾಗಿ ಹೇಳಿರುವುದಾಗಿ ಪೊಲೀಸರು ಹೇಳಿದ್ದಾರೆ.

Comments are closed.