ರಾಷ್ಟ್ರೀಯ

ಕೇಂದ್ರ ಸಚಿವ ವಿ.ಕೆ ಸಿಂಗ್ ಪತ್ನಿಗೆ ವ್ಯಕ್ತಿಯಿಂದ ಬ್ಲ್ಯಾಕ್ ಮೇಲ್

Pinterest LinkedIn Tumblr

vk-sibnghgನವದೆಹಲಿ: ತಮಗೆ ವ್ಯಕ್ತಿಯೊಬ್ಬ ಕರೆ ಮಾಡಿ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ವಿ.ಕೆ. ಸಿಂಗ್ ಪತ್ನಿ ಭಾರತಿ ಸಿಂಗ್ ದೂರು ದಾಖಲಿಸಿದ್ದಾರೆ.
ಪರಿಚಯಸ್ಥನೊಬ್ಬನ ಹೆಸರು ಹೇಳಿಕೊಂಡ ಬ್ಲಾಕ್ ಮೇಲ್ ಮಾಡಿ 2 ಕೋಟಿ ಹಣ ನೀಡುವಂತೆ ಬೆದರಿಕೆಯೊಡ್ಡಿದ್ದಾನೆಂದು ಭಾರತಿ ಸಿಂಗ್ ದೂರಿದ್ದಾರೆ.
ಪ್ರದೀಪ್ ಚೌಹಾಣ್ ಎಂಬಾತ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ. ನನಗೆ ಹಾಗೂ ಕುಟುಂಬದವರಿಗೆ ಪ್ರಾಣ ಬೆದರಿಕೆಯೊಡ್ಡಿದ್ದಾನೆಂದು ಭಾರತಿ ದೂರು ದಾಖಲಿಸಿದ್ದಾರೆ.
ದೆಹಲಿಯ ತುಘಲಕ್ ರಸ್ತೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗಸ್ಟ್ 6ರಂದು ತನ್ನ ಜೊತೆ ನಡೆಸಿದ ಸಂಭಾಷಣೆಯನ್ನು ರೆಕಾರ್ಡ್ ಮಾಡಿರುವ ಪ್ರದೀಪ್, ಸಾಮಾಜಿಕ ಜಾಲತಾಣದಲ್ಲಿ ಇದನ್ನು ಪೋಸ್ಟ್ ಮಾಡುವುದಾಗಿ ಬೆದರಿಸಿದ್ದಾನೆ. ಅಲ್ಲದೆ 2 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಆಡಿಯೋದಲ್ಲಿ ಏನಿದೆ ಎಂಬುದು ತಮಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.

Comments are closed.