
ನವದೆಹಲಿ: ಸತತ 4ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಇಳಿಕೆ ಕಂಡುಬಂದಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 1 ರು. ಹಾಗೂ ಡೀಸೆಲ್ ದರದಲ್ಲಿ 2 ರು. ಕಡಿತಗೊಳಿಸಲಾಗಿದೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾತೈಲ ದರಗಳ ದಿನೇ ದಿನೇ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಪರಿಣಾಮ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ದರ ಇಳಿಕೆ ಮಾಡಿ ಭಾರತೀಯ ತೈಲೋತ್ಪನ್ನ ಸಂಸ್ಥೆಗಳು ನಿರ್ಧಾರ ಕೈಗೊಂಡಿದ್ದರಿಂದ ನೂತನ ದರಗಳ ನಿನ್ನೆ ಮಧ್ಯರಾತ್ರಿಯಿಂದಲೇ ಜಾರಿಯಾಗಿವೆ.
ಪ್ರಸ್ತುತ ದರ ಇಳಿಕೆಯನ್ನು ಸೇರಿದಂತೆ ಕಳೆದ ಜುಲೈ ತಿಂಗಳನಿಂದ ಈ ವರೆಗೂ 4 ಬಾರಿ ಪೆಟ್ರೋಲಿಯಂ ಉತ್ಪನ್ನಗಳ ದರ ಇಳಿಕೆಯಾಗಿವೆ. ಅಂತೆಯೇ ಡಾಲರ್ ಎದುರು ರುಪಾಯಿ ಚೇತರಿಕೆ ಕೂಡ ದರ ಇಳಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಆರ್ಥಿಕ ತಜ್ಞರ ಪ್ರಕಾರ ಇನ್ನೂ ಕೆಲವು ದಿನಗಳ ಕಾಲ ಡಾಲರ್ ಎದುರು ರುಪಾಯಿ ಮೌಲ್ಯ ಏರಿಕೆ ಮುಂದುವರೆಯಲಿದ್ದು, ಅಮೆರಿಕನ್ ಬ್ಯಾಂಕುಗಳ ಬಡ್ಡಿ ಏರಿಕೆ ಇದಕ್ಕೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ.
Comments are closed.