ಮನೋರಂಜನೆ

ಬಾಲಿವುಡ್‌ಗೆ ಹಾರಲಿದ್ದಾರೆ ಮತ್ತೊಬ್ಬ ಕನ್ನಡತಿ

Pinterest LinkedIn Tumblr

baliಬೆಂಗಳೂರು: ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ ಆದ್ಮೇಲೆ ಇದೀಗ ಮತ್ತೊಬ್ಬ ನಟಿ ಬಾಲಿವುಡ್‌ಗೆ ಹಾರಲಿದ್ದಾರೆ. 22 ವರ್ಷದ ಬೆಂಗಳೂರು ಮೂಲದ ನಿಧಿ ಅಗರವಾಲ್ ಬಾಲಿವುಡ್ ಎಂಟ್ರಿ ನೀಡುವ ಖುಷಿಯಲ್ಲಿದ್ದಾರೆ.

ಎಲ್ಲಾ ನಟಿಯರಂತೆ ಇವರಿಗೂ ಕೂಡ ಬಾಲಿವುಡ್‌ಗೆ ಹಾರಿ ಅಲ್ಲಿ ಕೆಲಸ ಮಾಡುವ ಕನಸು ಇತ್ತು. ನಿಧಿ ಅಗರ್ವಾಲ್ ಬ್ಯೂಸಿನೆಸ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡುತ್ತಿದ್ದಾರೆ. ಕೆಲ ತಿಂಗಳುಗಳ ಹಿಂದೆ ಸಬೀರ್ ಖಾನ್ ಮ್ಯೂಸಿಕಲ್ ಆ್ಯಕ್ಷನ್ ಡ್ರಾಮಾ ಚಿತ್ರಕ್ಕೆ ಸಹಿ ಹಾಕಿದ್ದಾರಂತೆ. ಈ ಚಿತ್ರದಲ್ಲಿ ಟೈಗರ್ ಶ್ರಾಫ್ ಜತೆಗೆ ಸ್ಕ್ರೀನ್ ಶೇರ್ ಮಾಡಕೊಳ್ಳಲಿದ್ದಾರೆ ಕನ್ನಡತಿ ನಿಧಿ ಅಗರ್‌ವಾಲ್

ನಾನು ನಟಿಯಾಗಲು ಬಯಸಿದ್ದೆ, ಯಾವಾಗಲೂ ಐಶ್ವರ್ಯ ರೈಯನ್ನು ನೋಡುತ್ತಿದ್ದೆ ಎಂದು ತಿಳಿಸಿದರು. ನಾನು ಆ್ಯಕ್ಟಿಂಗ್ ಹಾಗೂ ಡ್ಯಾನ್ಸಿಂಗ್ ಕ್ಲಾಸ್‌ಗಳಲ್ಲಿ ಬ್ಯೂಸಿ ಆಗಿದ್ದೇನೆ ಎಂದು ಹೇಳಿದರು.

Comments are closed.