ರಾಷ್ಟ್ರೀಯ

ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಧ್ವಜಾರೋಹಣ ಮಾಡುತ್ತಿದ್ದಂತೆ ಕೆಳಗಿಳಿಯಿತು ಧ್ವಜ

Pinterest LinkedIn Tumblr

muಕಾಶ್ಮೀರ,: ಕಾಶ್ಮೀರದ ಬಕ್ಷಿ ಮೈದಾನದಲ್ಲಿ ದೇಶದ 70ನೇ ಸ್ವಾತಂತ್ರ್ಯ ಉತ್ಸವ ನಿಮಿತ್ಯ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಧ್ವಜಾರೋಹಣ ಮಾಡುತ್ತಿದ್ದಂತೆ ತ್ರಿವರ್ಣ ಧ್ವಜ ಕೆಳಗಿಳಿದ ಘಟನೆ ನಡೆದಿದೆ. ತ್ರಿವರ್ಣ ಧ್ವಜ ಕೆಳಗೆ ಬಿದ್ದ ಹಿನ್ನೆಲೆ ಮೆಹಬೂಬಾ ಮುಫ್ತಿಗೆ ತೀರ್ವ ಮುಜಿಗರ ಉಂಟಾಯಿತು.

ತೀವ್ರ ಇರುಸು ಮುರುಸಿನ ಪ್ರಸಂಗ ಎದುರಿಸದ ಅವರು ಅವರು ಧ್ವಜ ವಂದನೆಯನ್ನು ವಿದ್ಯುಕ್ತವಾಗಿ ಮುಗಿಸುವ ತನಕ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡರು.

ಇದೇ ವೇಳೆ ಮೆಹಬೂಬ ತಮ್ಮ ಭಾಷಣದಲ್ಲಿ ಪ್ರದಾನಿ ನರೇಂದ್ರ ಮೋದಿ ಅವರ ಕಾಶ್ಮೀರ ನೀತಿಯನ್ನು ಹೊಗಳಿದರು.
ಪಾಕ್ ಸಂಬಂಧ ಸುಧಾರಿಸುಲ ಹಾಗೂ ಮಾತುಕತೆಯನ್ನು ಪುನರಾಂರಭಿಸುವ ಮೋದಿ ಅವರ ಯತ್ನಗಳು ವಿಫಲವಾದ್ರು ಅವು ಧನಾತ್ಮಕ ಹೆಜ್ಜೆಗಳಾಗಿವೆ ಎಂದು ನುಡಿದರು.

ಅಲ್ಲದೇ ಪಾಕಿಸ್ತಾನದಲ್ಲಿ ನಡೆದಿದ್ದ ಸಾರ್ಕ್ ರಾಷ್ಟ್ರಗಳ ಒಳಾಡಳಿತ ಹಾಗೂ ಗೃಹ ಸಚಿವರ ಸಭೆಯಲ್ಲಿ ಪಾಲ್ಗೊಂಡ ರಾಜಸ್ಥಾನ ಸಿಂಗ್ ಅವರನ್ನು ಪಾಕ್ ಸರಕಾರ ಕೆಟ್ಟದಾಗಿ ನಡೆಸಿಕೊಂಡದ್ದನ್ನು ಮೆಹಬೂಬ ತೀವ್ರವಾಗಿ ಖಂಡಿಸಿದರು.

Comments are closed.