ಅಂತರಾಷ್ಟ್ರೀಯ

ಕಲುಷಿತ ಆಹಾರ ಸೇವಿಸಿ (Food poisoning)ಉಂಟಾಗುವ ಅನಾರೋಗ್ಯಕ್ಕೆ ಈ ರೀತಿ ಚಿಕಿತ್ಸೆ ಮಾಡಿ…!

Pinterest LinkedIn Tumblr

food_poisoning

ಕಲುಷಿತ ಆಹಾರ ಸೇವಿಸಿ ಉಂಟಾದ ಅನಾರೋಗ್ಯ ಸಮಸ್ಯೆಯನ್ನು ನಿವಾರಿಸುವಲ್ಲಿ ಬಹಳ ಕಷ್ಟಪಡಬೇಕಾಗುತ್ತದೆ. ವೈದ್ಯರ ಬಳಿ ಹೋಗಿ ಮಾತ್ರೆ ತೆಗೆದುಕೊಂಡು ಬಂದು ನುಂಗುವಷ್ಟು ಶಕ್ತಿಯೂ ಇಲ್ಲದಂತಾಗುತ್ತದೆ. ಕಲುಷಿತ ಆಹಾರ ಸೇವನೆಯ ಪರಿಣಾಮಗಳು ಕೆಲದಿನಗಳಲ್ಲಿ ಸರಿಹೋಗುತ್ತದೆ. ವಿಷಾಹಾರದ ಸಾಮಾನ್ಯ ಲಕ್ಷಣಗಳಾದ ವಾಕರಿಕೆ, ವಾಂತಿ, ಭೇದಿ ಇವು ಶಿಶುಗಳು, ಗರ್ಭಿಣಿ ಮಹಿಳೆಯರು, ವಯಸ್ಸಾದ ವೃದ್ಧರಿಗೆ ತಡೆದುಕೊಳ್ಳುವುದು ಬಹಳ ಕಷ್ಟ. ಈ ಸಂದರ್ಭದಲ್ಲಿ ಸ್ವತಃ ನೀವೇ ಕೆಲವು ಚಿಕಿತ್ಸೆಗಳನ್ನು ಮಾಡಿ ಅನಾರೋಗ್ಯವನ್ನು ದೂರಗೊಳಿಸಬಹುದು. ಅದು ಹೇಗೆ ಎಂದು ಇಲ್ಲಿ ನೋಡಿ.

ಹೆಚ್ಚು ಹೆಚ್ಚು ನೀರು ಕುಡಿಯಬೇಕು, ನೀರು ಅಥವಾ ದ್ರವ ಪದಾರ್ಥಗಳು, ಹಣ್ಣಿನ ರಸ ದೇಹಕ್ಕೆ ಸೇರಿದರೆ ಕಲುಷಿತ ಆಹಾರ ಸೇವನೆಯಿಂದ ಉಂಟಾದ ನಿರ್ಜಲೀಕರಣ, ನಿಶ್ಶಕ್ತಿ ದೂರವಾಗುತ್ತದೆ.
ಮದ್ಯಪಾನ, ಹಾಲು, ಮತ್ತು ಕೆಫಿನ್ ಯುಕ್ತ ಪಾನೀಯಗಳ ಸೇವನೆಯನ್ನು ಬಿಡಬೇಕು.

ಅಕ್ಕಿ, ಬಾಳೆಹಣ್ಣುಗಳು, ಟೋಸ್ಟ್, ತಿನ್ನಲು ಆರಂಭಿಸಬೇಕು.

ಕಲುಷಿತ ಆಹಾರ ಸೇವನೆಯಿಂದ ಉಂಟಾದ ಅನಾರೋಗ್ಯ ತಪ್ಪಿಸಲು ಕೊಬ್ಬಿನ ಅಂಶಗಳಿರುವ ಆಹಾರಗಳು, ಸಕ್ಕರೆ ಹೆಚ್ಚಿರುವ ಆಹಾರಗಳು, ಮಸಾಲೆ ಪದಾರ್ಥಗಳು, ಕರಿದ ಕುರುಕಲು ಆಹಾರಗಳು ಹಾಗೂ ಬೇಕ್ರಿ ತಿನಿಸುಗಳನ್ನು ಸಂಪೂರ್ಣವಾಗಿ ಬಿಡಬೇಕು.
ಈ ಸಮಯದಲ್ಲಿ ಯಾವ ಕಾರಣಕ್ಕೂ ಹೊಟ್ಟೆ ಖಾಲಿ ಇರದಂತೆ ನೋಡಿಕೊಳ್ಳ ಬೇಕು, ಅರ್ಧ ಗಂಟೆಗೊಮ್ಮೆ ಏನಾದರೂ ಆಹಾರ ಸೇವನೆ ಒಳ್ಳೆಯದು.

ತುಳಸಿ, ಜೀರಿಗೆ, ಕೊತ್ತಂಬರಿ ಮತ್ತು ಗಿಡಮೂಲಿಕೆಗಳನ್ನು ಸೇವಿಸಿ.
ವಿಷಾಹಾರ ಸೇವನೆಯಿಂದ ಸುಸ್ತು ಆಯಾಸ ಉಂಟಾಗುತ್ತದೆ. ಈ ಸಮಯದಲ್ಲಿ ದೇಹಕ್ಕೆ ಆದಷ್ಟು ವಿಶ್ರಾಂತಿಯ ಅಗತ್ಯವಿರುತ್ತದೆ. ವಿಶ್ರಾಂತಿ ಪಡೆಯಿರಿ. ದೈಹಿಕ ಶ್ರಮದ ಕೆಲಸಗಳನ್ನು ಹೆಚ್ಚು ಮಾಡಬೇಡಿ.

ಕಲುಷಿತ ಆಹಾರ ಸೇವನೆಯಿಂದ ಉಂಟಾಗುವ ಲಕ್ಷಣಗಳು ತೀವ್ರವಾಗಿದ್ದರೆ, ಸುಧಾರಿಸದೇ ಇದ್ದರೆ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.

Comments are closed.