ಕರಾವಳಿ

ಹುಡುಗಿ ಗ್ರಹಸ್ಥಾಶ್ರಮಕ್ಕೆ ಕಾಲಿಡುವ ಮುನ್ನ ತಿಳಿಯಬೇಕಾದ ಹಾಗೂ ಪಾಲಿಸಬೇಕಾದ ಸೂತ್ರ, ಸಲಹೆಗಳು.

Pinterest LinkedIn Tumblr

indian_bridal_phot

ಏಳೇಳು ಜನ್ಮಗಳ ಅನುಬಂಧವೇ ಈ ಮದುವೆ. ವಧು ಮತ್ತು ವರನ ಸಂಬಂಧವನ್ನು ದೇವರೇ ನಿರ್ಧರಿಸುತ್ತಾನೆ ಎನ್ನುವ ನಂಬಿಕೆ ಕೂಡ ಇದೆ. ವರ ಮತ್ತು ವಧು ಸಂಪೂರ್ಣವಾಗಿ ಒಪ್ಪಿಗೆ ಸೂಚಿಸಿದ ಬಳಿಕ ಮದುವೆ ಕಾರ್ಯಗಳು ನಡೆಯುತ್ತದೆ.

ಮದುವೆಯು ಮುಗಿದು ಗ್ರಹಸ್ಥಾಶ್ರಮಕ್ಕೆ ಕಾಲಿಡುವ ವರ ಮತ್ತು ಮಧುವಿಗೆ ಹೊಸ ಜೀವನ ಆರಂಭಿಸುವ ತವಕ. ಅದರಲ್ಲೂ ವಧು ಮಾತ್ರ ಹುಟ್ಟಿನಿಂದ ಬೆಳೆದು ಬಂದ ಮನೆ, ತಂದೆ-ತಾಯಿ, ಸೋದರ-ಸೋದರಿಯನ್ನು ಬಿಟ್ಟು ಬಂದು, ಗಂಡನ ಮನೆಯಲ್ಲಿ ಹೊಸ ಜೀವನವನ್ನು ಆರಂಭಿಸುತ್ತಾಳೆ.

ಮದುವೆಯೆನ್ನುವುದು ಹುಡುಗಿಗೆ ಹೊಸ ಜೀವನದ ಆರಂಭ. ಹೊಸ ಕುಟುಂಬದೊಂದಿಗೆ ಬೆರೆಯುವಂತಹ ಹುಡುಗಿ ತುಂಬಾ ತಾಳ್ಮೆ ಮತ್ತು ಧೈರ್ಯವನ್ನು ಹೊಂದಿರಬೇಕು.

ಆಕೆ ಧನಾತ್ಮಕವಾಗಿದ್ದರೆ ಮಾತ್ರ ಜೀವನ ಒಳ್ಳೆಯ ರೀತಿ ಸಾಗಬಹುದು. ಇಲ್ಲವೆಂದಾದಲ್ಲಿ ಬಿರುಕು ಮೂಡುವುದು ಖಚಿತ. ಹಲವು ಹೊಂದಾಣಿಕೆ, ಬದಲಾವಣೆ ಮತ್ತು ತ್ಯಾಗ ಮಾಡಬೇಕಾಗುತ್ತದೆ. ಹೀಗಾದಲ್ಲಿ ಮಾತ್ರ ಜೀವನ ಸುಖಕರವಾಗಿರುತ್ತದೆ.

ಹೊಸ ಜೀವನವನ್ನು ಆರಂಭಿಸಲು ಹೊರಟಿರುವ ಹುಡುಗಿಯರಿಗೆ ಬೋಲ್ಡ್ ಸ್ಕೈ ಇಲ್ಲಿ ಸಲಹೆಗಳನ್ನು ನೀಡಿದೆ. ಇದನ್ನು ಪಾಲಿಸಿಕೊಂಡು ಹೋದರೆ ಪತಿಯೊಂದಿಗೆ ಜೀವನ ಸಂತೋಷವಾಗಿ ಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಪತಿಯ ಜೀವನ ಮತ್ತು ಆತನ ಕುಟುಂಬದೊಂದಿಗೆ ಹೊಂದಿಕೊಳ್ಳಲು ನೀವು ಪಾಲಿಸಬೇಕಾದ ಸೂತ್ರಗಳು ಇಲ್ಲಿವೆ……

ಮದುವೆಗೆ ಮೊದಲು ನೀವು ಹುಡುಗನ ಕುಟುಂಬದ ಬಗ್ಗೆ ಸ್ವಲ್ಪ ಮಟ್ಟಿಗೆ ಅಧ್ಯಯನ ಮಾಡಿಕೊಳ್ಳಿ. ಮಹಿಳೆಯಾಗಿ ನೀವು ಆ ಕುಟುಂಬದ ಸದಸ್ಯರ ಬೇಕುಬೇಡಗಳನ್ನು ಅರಿತುಕೊಂಡರೆ ಮುಂದೆ ಎಲ್ಲವೂ ಸುಗಮವಾಗುವುದು.

ಹೊಂದಾಣಿಕೆ ಮಾಡಿಕೊಳ್ಳುವ ಬದಲು ನೀವು ಪ್ರವೇಶಿಸುವ ಹೊಸ ಮನೆಯಲ್ಲಿನ ಜೀವನವನ್ನು ಅಳವಡಿಸಿಕೊಳ್ಳಿ. ಸಣ್ಣ ಬದಲಾವಣೆ ಮಾಡಿಕೊಂಡರೆ ಜೀವನದಲ್ಲಿ ಸಂತೋಷವನ್ನು ಕಾಣಬಹುದಾಗಿದೆ.

ಅತ್ತೆಯ ಜತೆಗೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಳ್ಳುವುದು ವಧುವಿಗೆ ತುಂಬಾ ಒಳ್ಳೆಯದು. ಅತ್ತೆ ಖುಷಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ.

ಹುಡುಗನ ಮನೆಗೆ ಮೊದಲ ಸಲ ಹೋದ ಬಳಿಕ ಹಠಾತ್ ಆಗಿ ನೀವು ಬದಲಾವಣೆಗಳನ್ನು ಮಾಡಲು ಹೋಗಬೇಡಿ. ಕುಟುಂಬದ ಹೊಸ ಸದಸ್ಯರಾಗಿರುವ ನೀವು ಅವರ ಮೌಲ್ಯಗಳನ್ನು ಗೌರವಿಸಬೇಕು. ಇದನ್ನು ಸಾಧಿಸಿದರೆ ನೀವು ಎಲ್ಲವನ್ನು ಗೆದ್ದಂತೆ.

ನೀವು ತೀರ್ಪು ನೀಡಲು ಹೋದರೆ ಅಲ್ಲಿ ಗೊಂದಲ ಉಂಟಾಗುವುದು. ಪತಿಯ ಮನೆಯಲ್ಲಿ ಹೆಚ್ಚಾಗಿ ತೀರ್ಪು ನೀಡುವಂತಹ ಕೆಲಸಕ್ಕೆ ಹೋಗಬೇಡಿ. ಹುಡುಗಿ ಕೇವಲ ಹುಡುಗನನ್ನು ಮಾತ್ರ ಮದುವೆಯಾಗಿರುವುದಿಲ್ಲ. ಆತನ ಕುಟುಂಬವನ್ನೇ ಮದುವೆಯಾಗಿರುವಂತೆ ಎನ್ನುವುದು ನೆನಪಿರಬೇಕು.

ಯಾವುದೇ ಸಂದರ್ಭದಲ್ಲಿ ವಧು ಹೊಸ ಕುಟುಂಬದ ಸದಸ್ಯರೊಂದಿಗೆ ಸಹನೂಭೂತಿಯನ್ನು ಹೊಂದಿರಬೇಕು. ಇತರ ಸದಸ್ಯರು ಮಾತಿನ ಚಕಮಕಿಗೆ ಮುಂದಾದರೂ ತಾನು ಮಾತ್ರ ಸಹನೂಭೂತಿಯನ್ನು ತೋರಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Comments are closed.