ಮನೋರಂಜನೆ

ನಟನೆಗೆ ಮಾವ ವಿರೋಧ, ಪತಿಗೆ ವಿಚ್ಛೇದನ ನೀಡಿದ ಅಮಲಾ

Pinterest LinkedIn Tumblr

amla-webನವದೆಹಲಿ: ದಕ್ಷಿಣ ಭಾರತದ ಸ್ಟಾರ್ ನಟಿ ಅಮಲಾ ಪೌಲ್ ಅವರ ಸಿನಿ ಬದುಕಿಗೆ ಮಾವನೇ ಶತ್ರುವಾದ ಹಿನ್ನೆಲೆಯಲ್ಲಿ ಪತಿಗೆ ವಿಚ್ಛೇದನ ನೀಡಿದ್ದಾರೆ.

ಇದಿಂದಾಗಿ ಅಮಲಾ ಅವರ ಎರಡು ವರ್ಷದ ದಾಂಪತ್ಯ ಜೀವನಕ್ಕೆ ಬ್ರೇಕ್ ಬಿದ್ದಂತಾಗಿದೆ. ಇದೀಗ ಅಮಲಾ ಮಲಯಾಳಿ ಚಿತ್ರ ಷಹಜಾನುಂ ಪರೀಕುತ್ತಿಯುಮ್ ಚಿತ್ರದಲ್ಲಿ ಬ್ಯುಸಿ ಆಗಿದ್ದು, ಪತಿ ಎ.ಎಲ್. ವಿಜಯ್ ಅವರ ತಂದೆ ಎ.ಎಲ್ ಅಜಗಪ್ಪನ್ ನಟನೆಗೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗುತ್ತಿದೆ. ಈ ವಿಚಾರವಾಗಿ ಪತಿ ವಿಜಯ್ ಹೆತ್ತವರ ನಿರ್ಣಯಕ್ಕೆ ಬದ್ಧನಾಗಿರುವೆ ಎಂದು ತಿಳಿಸಿದ್ದಾರೆ.

ವಿವಾಹದ ನಂತರ ಕೂಡ ಅಮಲಾ ಹಲವು ಚಿತ್ರಗಳಲ್ಲಿ ಅಭಿನಯಿಸಿ ಜನಮನ್ನಣೆ ಪಡೆದಿದ್ದರು. ಆದರೆ ಪ್ರಾರಂಭದಿಂದಲೂ ಪತಿಯ ಕುಟುಂಬದಿಂದ ನಟನೆಗೆ ವಿರೋಧವಿತ್ತು. ಇದರಿಂದಾಗಿ ಅಮಲಾ ಹಲವು ಆಫರ್ಗಳನ್ನು ತಿರಸ್ಕರಿಸಿದ್ದರು. ಇದೀಗ ಸಿನಿ ಬದುಕಿನಿಂದ ಸಂಪೂರ್ಣ ದೂರವಾಗುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅಮಲಾ ಮಾವ, ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿರುವುದು ನೂರಕ್ಕೆ ನೂರು ಪ್ರತಿಶತ ಸತ್ಯ. ನನಗೆ ನನ್ನ ಮಗನ ಭವಿಷ್ಯ ಮುಖ್ಯ, ಹೆತ್ತವರ ಬಳಿ ಮಾತನಾಡಿಯೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ. 2014ರಲ್ಲಿ ಅಮಲಾ ನಿರ್ದೇಶಕ ಎ.ಎಲ್. ವಿಜಯ್ ಅವರೊಂದಿಗೆ ಹಸೆಮಣೆ ಏರಿದ್ದರು .

Comments are closed.