ಮನೋರಂಜನೆ

ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಿಸ್ಸಿಂಗ್ ಫೋಟೋ ಈಗ ವೈರಲ್

Pinterest LinkedIn Tumblr

kissing_webಮುಂಬಯಿ: ಖ್ಯಾತ ಬಾಲಿವುಡ್ ಅಭಿನೇತ್ರಿ ಶ್ರೀದೇವಿ-ಬೋನಿ ಕಪೂರ್ ಪುತ್ರಿ ಜಾಹ್ನವಿ ಕಪೂರ್ ಈಗ ಭಾರಿ ಸುದ್ದಿಯಲ್ಲಿದ್ದಾರೆ.

ಜಾಹ್ನವಿ ಅವರು ತನ್ನ ಬಾಯ್ಫ್ರೆಂಡ್ ಶಿಖಾರ್ ಪಹಾರಿಯಾಗೆ ಮುತ್ತು ನೀಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಅತಿ ವೇಗವಾಗಿ ಹರಿದಾಡುತ್ತಿವೆ.

ಪ್ರಸ್ತುತ ನ್ಯೂರ್ಯಾನಲ್ಲಿ ಸಿನಿಮಾ ಅಭಿನಯ ತರಬೇತಿ ಪಡೆಯುತ್ತಿರುವ ಜಾಹ್ನವಿ ರತಿ ವರ್ಚಸ್ಸಿನ ಬೆಡಗಿ ಎಂಬುದರಲ್ಲಿ ಎರಡು ಮಾತಿಲ್ಲ. ಆಕೆಯ ಬಾಯ್ ಫ್ರೆಂಡ್ ಶಿಖಾರ ಎಂಬುದು ಈಗಾಗಲೇ ಅವರ ಫ್ಯಾನ್ಗಳಿಗೆಲ್ಲಾ ತಿಳಿದಿದೆ. ಬಾಲಿವುಡ್ ಪ್ರವೇಶಕ್ಕೆ ಮುನ್ನವೇ ಜಾಹ್ನವಿ ಈ ರೀತಿಯ ಚಿತ್ರಗಳನ್ನು ಬಹಿರಂಗಗೊಳಿಸಿ ತನ್ನ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ. ಈ ಚಿತ್ರ ಎಲ್ಲಿಂದ ಜಾಲತಾಣಕ್ಕೆ ಬಂತೆಂಬುದು ನಿಖರವಾಗಿ ತಿಳಿದಿಲ್ಲ, ಆದರೂ ಭಾರಿ ಪ್ರಚಾರ ಪಡೆದುಕೊಳ್ಳುತ್ತಿದೆ.

ಈಗಾಗಲೇ ಖ್ಯಾತ ಸೆಲೆಬ್ರಿಟಿಗಳ ಮಕ್ಕಳಾದ ಆರ್ಯನ್ಖಾನ್, ನವ್ಯಾ ನವೇಲಿ ನಂದಾ, ಸಾರಾ ಅಲಿ ಖಾನ್, ಇಬ್ರಾಹಿಂ ಅಲಿಖಾನ್ ಮತ್ತಿತರರು ವಿವಿಧ ವಿಚಾರಗಳಿಂದಾಗಿ ಜಾಲತಾಣಗಳಲ್ಲಿ ಪ್ರಖ್ಯಾತಿ ಗಳಿಸಿದ್ದಾರೆ. ಈಗ ಅದು ಶ್ರೀದೇವಿ ಪ್ರಥಮ ಪುತ್ರಿ ಸರದಿ.

Comments are closed.