ರಾಷ್ಟ್ರೀಯ

ಮೆಹಬೂಬಾ ಮುಫ್ತಿಗೆ ದೇಶ-ವಿರೋಧಿ ಘೋಷಣೆ ಸ್ವಾಗತ

Pinterest LinkedIn Tumblr

mehಶ್ರೀನಗರ: ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಯುತ್ತಿದ್ದ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿದ್ದ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರಿಗೆ ದೇಶವಿರೋಧಿ ಘೋಷಣೆಗಳ ಮೂಲಕ ಸ್ವಾಗತವನ್ನು ನೀಡಲಾಯಿತು.

ಶ್ರೀನಗರದ ಎಮ್.ಎ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಕಾಲೇಜಿನ ಹೊರಗೆ ನಿಂತಿದ್ದ ವಿದ್ಯಾರ್ಥಿಗಳ ಪೋಷಕರು ಮುಖ್ಯಮಂತ್ರಿ ಅಲ್ಲಿಗೆ ಆಗಮಿಸುತ್ತಿದ್ದಂತೆ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು. ಆ ಸಂದರ್ಭದಲ್ಲಿ ಅವರ ಮಕ್ಕಳು ಒಳಗೆ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಬರೆಯುತ್ತಿದ್ದರು.

ಕುಪ್ವಾರಾ, ಬರಾಮುಲ್ಲಾ, ಶೋಪಿಯನ ಜಿಲ್ಲೆಗಳಿಂದ ಬಂದ ಪೋಷಕರು ತಮ್ಮ ಮಕ್ಕಳು ಪರೀಕ್ಷೆ ಬರೆದು ಹೊರ ಬರುವುದನ್ನು ಕಾಯುತ್ತಿದ್ದಾಗ ಸಿಎಂ ವಾಹನ ಅವರಿಗೆ ಕಂಡಿದೆ. ಆ ಸಂದರ್ಭದಲ್ಲಿ ಅವರು ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ.

ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳನ್ನು ಶ್ರೀನಗರಕ್ಕೆ ಕರೆ ತರಲು ಸರ್ಕಾರ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಮಾಡಿದೆ. ಪರೀಕ್ಷಾ ನಂತರ ಅವರನ್ನು ಮರಳಿ ಅವರವರ ಜಿಲ್ಲೆಗಳಿಗೆ ಕಳುಹಿಸಲಾಗುವುದು.

ಹಲವು ಜನರು ತಮ್ಮ ಸ್ವಂತ ವಾಹನದಲ್ಲಿ ಮಕ್ಕಳನ್ನು ಕರೆದುಕೊಂಡು ಬಂದಿದ್ದರು.

Comments are closed.