ಗಲ್ಫ್

ಸೌದಿಯಲ್ಲಿ ಊಟಕ್ಕೆ ಭಾರತೀಯರ ಪರದಾಟ, ಸ್ಪಂದಿಸಿದ ಕೇಂದ್ರ

Pinterest LinkedIn Tumblr

Saudi_webನವದೆಹಲಿ: ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ನಲ್ಲಿ ಕೆಲಸ ಕಳೆದುಕೊಂಡಿರುವ ಭಾರತದ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ತುತ್ತು ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಭಾರತೀಯರ ರಕ್ಷಣೆಗೆ ನಿಂತಿದ್ದು, ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜ್ಯ ಖಾತೆ ಸಚಿವ ವಿ ಕೆ ಸಿಂಗ್ರನ್ನು ಗಲ್ಪ್ ರಾಷ್ಟ್ರಕ್ಕೆ ಕಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸುಷ್ಮಾ ಸ್ವರಾಜ್, ಸಂಕಷ್ಟದಲ್ಲಿರುವ ಭಾರತೀಯರ ರಕ್ಷಣೆಗೆ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಲಿದೆ ಎಂದಿದ್ದಾರೆ. ಅಲ್ಲದೆ ಗಲ್ಪ್ನಲ್ಲಿ ನೆಲೆಸಿರುವ ಭಾರತೀಯರಿಗೆ ನಿಮ್ಮ ಅಣ್ಣ-ತಂಗಿಯರತ್ತ ಸಹಾಯ ಹಸ್ತ ಚಾಚಿ ಎಂದು ಟ್ವೀಟಿಸಿದ್ದಾರೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಹಲವು ಕಂಪನಿಗಳು ಭಾರತೀಯರು ಸೇರಿದಂತೆ ಕೆಲಸಗಾರರ ಉದ್ಯೋಗಕ್ಕೆ ಕತ್ತರಿ ಹಾಕಿದ್ದರ ಪರಿಣಾಮ ಆಹಾರವಿಲ್ಲದೆ ಪರದಾಡುವ ಪರಿಸ್ಥಿತಿ ತಲೆದೋರಿದೆ.

ಸೌದಿ ಮತ್ತು ಕುವೈತ್ನಲ್ಲಿ ಉದ್ಯೋಗ ಕಳೆದುಕೊಂಡಿರುವವರಿಗೆ ವೇತನ ಕೂಡ ನೀಡದೆ ಮಾನವ ಬಿಕ್ಕಟ್ಟು ಉಲ್ಬಣಿಸಿದೆ. ಜೆಡ್ಡಾದಲ್ಲಿ ಅನುಭವಿಸುತ್ತಿರುವ ಪರಿಪಾಟಲು ಚಿತ್ರಗಳನ್ನು ಸುಷ್ಮಾರಿಗೆ ಟ್ವೀಟ್ ಮಾಡಿದ್ದ ಭಾರತೀಯನೊಬ್ಬ ಸಹಾಯಕ್ಕಾಗಿ ಯಾಚಿಸಿದ್ದ. ಕೂಡಲೇ ಸ್ಪಂದಿಸಿದ ಸುಷ್ಮಾ ಸೌದಿಯ ಭಾರತದ ರಾಯಭಾರಿ ಕಚೇರಿಗೆ ಸಂಪರ್ಕಿಸಿ ಆಹಾರ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಕುವೈತ್ಗಿಂತ ಸೌದಿ ಅರೇಬಿಯಾದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಸಚಿವ ಎಂ. ಜೆ. ಅಕ್ಬರ್ ಈ ಕುರಿತು ಮಾತುಕತೆ ನಡೆಸಲು ಸೌದಿ ಮತ್ತು ಕುವೈತ್ ಸಚಿವಾಲಯ ವಕ್ತಾರರ ಭೇಟಿಯಾಗಲಿದ್ದಾರೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

30 ಲಕ್ಷ ವಲಸಿಗ ಭಾರತೀಯರು ಸೌದಿಯಲ್ಲಿ ನೆಲೆಸಿದ್ದರೆ, 80 ಸಾವಿರ ಜನ ಕುವೈತ್ನಲ್ಲಿದ್ದಾರೆ. ಬಿಕ್ಕಟ್ಟಿನ ಕುರಿತು ಗಂಟೆಗೊಮ್ಮೆ ಮಾಹಿತಿ ಪಡೆಯುತ್ತಿರುವುದಾಗಿ ಸುಷ್ಮಾ ಹೇಳಿದ್ದಾರೆ.

Comments are closed.