ಕರ್ನಾಟಕ

ಸಿಎಂ ಜೇಷ್ಠಪುತ್ರ ರಾಕೇಶ್ ಅಗಲಿಕೆಯಿಂದ ಮೈಸೂರಿನಲ್ಲಿ ನೀರವ ಮೌನ!

Pinterest LinkedIn Tumblr

siಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಜೇಷ್ಠಪುತ್ರ ರಾಕೇಶ್ ನಿಧನದ ಹಿನ್ನೆಲೆಯಲ್ಲಿ ಅವರ ತವರು ಜಿಲ್ಲೆಯಾದ ಮೈಸೂರಿನಲ್ಲಿ ನೀರವ ಮೌನ ಆವರಿಸಿದೆ.

ಇತ್ತೀಚೆಗಷ್ಟೇ ಜುಲೈ 13 ರಂದು 39 ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ರಾಕೇಶ್ ಸಿದ್ದರಾಮಯ್ಯ, ಸ್ನೇಹಿತರೊಂದಿಗೆ ಬೆಲ್ಜಿಯಂ ಪ್ರವಾಸ ಕೈಗೊಂಡಿದ್ದರು. ಬೆಲ್ಜಿಯಂ ಪ್ರವಾಸಕ್ಕೆ ತೆರಳುವ ಮುನ್ನವೆ ಯಕೃತ್‌ (ಲಿವರ್‌) ಸಮಸ್ಯೆಯಿಂದ ಬಳಲುತ್ತಿದ್ದರು. ಪ್ರವಾಸದ ವೇಳೆ ಅವರ ಆರೋಗ್ಯ ಹದಗೆಟ್ಟಿತ್ತು. ಅವರನ್ನು ಬ್ರೂಸೆಲ್ಸ್ ಯೂನಿವರ್ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ರಾಜಕೀಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಾಥ್ ನೀಡುತ್ತಿದ್ದ ರಾಕೇಶ್ ಅವರ ಅಗಲಿಕೆಯಿಂದ ಕುಟುಂಬ ವರ್ಗ, ಬಂಧು ಬಳಗ ಹಾಗೂ ಸ್ನೇಹಿತರು ಸೇರಿದಂತೆ ಮೈಸೂರು ಜನತೆ ಶೋಕದಲ್ಲಿ ಮುಳುಗಿದ್ದಾರೆ.

ಸಿಎಂ ಪುತ್ರ ರಾಕೇಶ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಸಚಿವ ಮಹದೇವ ಪ್ರಸಾದ್, ರಾಕೇಶ್ ಸಿದ್ದರಾಮಯ್ಯನವರ ಅಂತ್ಯ ಸಂಸ್ಕಾರವನ್ನು ಸೋಮವಾರ ಮೈಸೂರು ಹೊರವಲಯದ ಟಿ.ಕಾಟೂರಿನ ಫಾರ್ಮ್ ಹೌಸ್‌ನಲ್ಲಿ ನೆರವೇರಲಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Comments are closed.