ಮುಂಬೈ: ನಟಿ ಭಾಗಶ್ರೀ ಇನ್ಸ್ಟಾಗ್ರಾಮ್ನಲ್ಲಿ ಗ್ಲಾಸರಸ್ ಆಗಿರುವಂತಹ ಫೊಟೋ ಶೇರ್ ಮಾಡಿದ್ದಾರೆ. 47ವರ್ಷದ ಭಾಗಶ್ರೀ ಗ್ರಿಸ್ ಹಾಗೂ ಲಂಡನ್ ಗೆ ಭೇಟಿ ನೀಡಿರುವ ಕೆಲ ಫೊಟೋಗಳನ್ನು ಶೇರ್ ಮಾಡಿದ್ದಾರೆ.
ಅವರ ಜತೆಗೆ ಪತಿ ಹಿಮಾಲಯ ಕೂಡ ಫೊಟೋದಲ್ಲಿ ಕಾಣಬಹುದು. ‘ಮೈನೆ ಪ್ಯಾರ್ ಕಿಯಾ’ ಚಿತ್ರದ ಮೂಲಕ ರಸಿಕರ ಪಡ್ಡೆ ಹುಡುಗರ ಮನ ಗೆದ್ದ ನಟಿ ಭಾಗ್ಯಶ್ರೀ ಬಹಳ ದಿನದಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದರು.
ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜತೆಗೆ ನಟಿಸಿ ಫೇಮಸ್ ಆಗಿದ್ದ ನಟಿ ಭಾಗಶ್ರೀ ಕೂಡಾ ವಿವಾಹದ ಬಳಿಕ ಚಿತ್ರರಂಗದಲ್ಲ ಅಷ್ಟಕ್ಕಷ್ಟೇ.. ಇತ್ತೀಚೆಗೆ ಟಿವಿ ಶೋ ಒಂದರಲ್ಲಿ ಕಾಣಿಸಿಕೊಂಡ ಭಾಗ್ಯಶ್ರೀ ಅದೇ ಛಾಪು ಹೊಂದಿದ್ದರು.
ಟಿವಿ ಸೀರಿಯಲ್ ಲೌಟ್ ಆವೋ ತೃಷಾ ಎಂಬ ಧಾರವಾಹಿ ಮೂಲಕ ಮತ್ತೆ ಚಿಕ್ಕ ಪರದೆ ಮೇಲೆ ಮಿಂಚಿದರು. ಇನ್ನೂ ಇನ್ಸ್ಟಾಗ್ರಾಮ್ನಲ್ಲಿ ಫೊಟೋ ಪೋಸ್ಟ್ ಮಾಡಿರುವ ಭಾಗಶ್ರೀ ತುಂಬಾ ಗ್ಲಾಮರಸ ಆಗಿ ಕಾಣಿಸಿಕೊಂಡಿದ್ದಾರೆ.
Comments are closed.