ರಾಷ್ಟ್ರೀಯ

ಮುಗ್ಧ ಕಾಶ್ಮೀರಿಗಳನ್ನು ಕೊಲ್ಲಲು ಬಂದಿರುವೆ, ಉಗ್ರ ಬಹದ್ದೂರ್ ಅಲಿ

Pinterest LinkedIn Tumblr

pakistqani-terrer-ಶ್ರೀನಗರ: ಇತ್ತೀಚೆಗಷ್ಟೇ ಕಾಶ್ಮೀರದಲ್ಲಿ ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ಜೀವಂತವಾಗಿ ಸೆರೆಸಿಕ್ಕ ಪಾಕಿಸ್ತಾನಿ ಉಗ್ರ ಬಹದ್ದೂರ್ ಅಲಿಯನ್ನು ರಾಷ್ಟ್ರೀಯ ತನಿಖಾ ದಳ ವಿಚಾರಣೆ ನಡೆಸುತ್ತಿದ್ದು ಈ ವೇಳೆ ತಾನು ಕಾಶ್ಮೀರದ ಅಮಾಯಕರನ್ನು ಕೊಲ್ಲಲು ಬಂದಿರುವುದಾಗಿ ಉಗ್ರ ಅಲಿ ಬಾಯಿ ಬಿಟ್ಟಿದ್ದಾನೆ.

22ರ ಬಹದ್ದೂರ್ ಅಲಿ ಆಲಿಯಾಸ್ ಸೈಫುಲ್ಲಾಹ್ ತಾನು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯಿಂದ ತರಬೇತಿ ಪಡೆದಿದ್ದು ಜಮಾತ್ ಉದ್ ದವಾಹ್ ನ ಮುಖ್ಯಸ್ಥ ಹಫೀಜ್ ಸಯೀದ್ನನ್ನು ಎರಡು ಬಾರಿ ಭೇಟಿಮಾಡಿರುವುದಾಗಿ ತಿಳಿಸಿದ್ದಾನೆ.

ಕುಪ್ವಾರದಲ್ಲಿ ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಉಗ್ರರು ಮೃತರಾಗಿದ್ದು ಬಹದ್ದೂರ್ ಅಲಿ ಮಾತ್ರ ಜೀವಂತವಾಗಿ ಸೆರೆಸಿಕ್ಕಿದ್ದ.

Comments are closed.