ರಾಷ್ಟ್ರೀಯ

ತಲೆತೋವು ತಂದ ರಾಜಕೀಯ: ಕೇಜ್ರಿವಾಲ್ ಧ್ಯಾನಕ್ಕೆ ಶರಣು

Pinterest LinkedIn Tumblr

arvind-kejriwal-yoga-split-650_650x400_61426157543ದೆಹಲಿ: ಕೆಲ ಸಮಯಗಳಿಂದ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೊಂಚ ರಿಲ್ಯಾಕ್ಸ್ ಆಗಲು ತೀರ್ಮಾನಿಸಿದ್ದಾರೆ. ಶನಿವಾರದಿಂದ ಹನ್ನೆರಡು ದಿನಗಳಕಾಲ ರಾಜಕೀಯ ಹಾಗೂ ಪ್ರಸ್ತುತ ವಿದ್ಯಾಮಾನಗಳಿಂದ ದೂರವಿರಲು ಧ್ಯಾನದ ಮೊರೆಹೋಗಲಿದ್ದಾರೆ ಎಂದು ತಿಳಿದು ಬಂದಿದೆ. ಇವರ ಅನುಪಸ್ಥಿತಿಯಲ್ಲಿ ರಾಜ್ಯವನ್ನು ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಮುನ್ನಡೆಸಲಿದ್ದಾರೆ.

ಅರವಿಂದ್ ಕೇಜ್ರಿವಾಲ್ ನಾಗ್ಪುರದ ವಿಪಸನ ಧ್ಯಾನ ಕೇಂದ್ರಕ್ಕೆ ಶನಿವಾರ ಪ್ರಯಾಣ ಬೆಳೆಸಲಿದ್ದಾರೆ. ಈ ಸಂದರ್ಭದಲ್ಲಿ ಕೇಜ್ರಿವಾಲ್ ಯಾವುದೇ ಮಾಧ್ಯಮ ಹಾಗೂ ಪೋನ್ ಕರೆಗೆ ಸಿಗುವುದಿಲ್ಲ ಎಂದು ಆಪ್ ಸಂಘಟಕರು ತಿಳಿಸಿದ್ದಾರೆ.

ಕೇಜ್ರಿವಾಲ್ ಮನಶ್ಯಾಂತಿ ಹಾಗೂ ಆರೋಗ್ಯದ ಕಾಳಜಿಗಾಗಿ ಧ್ಯಾನ ಕೇಂದ್ರದ ಮೊರೆಹೋಗುತ್ತಿರುವುದು ಇದೇ ಮೊದಲ ಬಾರಿಗಲ್ಲ. ಈ ಹಿಂದೆ 2015ರ ಲೋಕ ಸಭಾ ಚುನಾವಣಾ ಪ್ರಚಾರದ ನಂತರ ಇದೇ ಧ್ಯಾನಕೇಂದ್ರದಲ್ಲಿ ಕೆಲ ದಿನಗಳಕಾಲ ಸಮಯಕಳೆದಿದ್ದರು. ಪ್ರಸಕ್ತ ರಾಜಕೀಯ ವಿದ್ಯಮಾನಗಳು ಹಾಗೂ ಆಪ್ ಕಾರ್ಯಕರ್ತರ ಮೇಲಿನ ಪ್ರಕರಣಗಳು ಕೇಜ್ರಿವಾಲ್ ಅವರಿಗೆ ತಲೆನೋವು ತಂದಿದೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ ಕೇಜ್ರಿವಾಲ್ ಅವರು ಇದೇ ರೀತಿ ವಿಪಸನ ಧ್ಯಾನ ತರಬೇತಿಗೆ ಸರ್ಕಾರಿ ಶಾಲೆಯ ಶಿಕ್ಷಕರನ್ನು ಕಳುಹಿಸಲು ಚಿಂತಿಸಿದ್ದರು. ಆದರೆ ಇದಕ್ಕೆ ಶಿಕ್ಷಕರು ಒಲವು ತೋರಿಸದ ಹಿನ್ನಲೆ ಈ ಯೋಜನೆಯನ್ನು ಕೈ ಬಿಡಲಾಗಿತ್ತು. ಈಗ ಕೇಜ್ರಿವಾಲ್ ಖುದ್ದಾಗಿ ವಿಪಸನ ಶಿಬಿರಕ್ಹೊಕೆ ರಡಲು ಅಣಿಯಾಗಿದ್ದಾರೆ.

Comments are closed.