ಕರ್ನಾಟಕ

ಭಾರಿ ಮಳೆಗೆ ಧರೆಗುರುಳಿದ ಮರಗಳು

Pinterest LinkedIn Tumblr

rainಬೆಂಗಳೂರು, ಜು.೨೯: ನಿನ್ನೆ ರಾತ್ರಿ ಸುರಿದ ಭಾರಿ ಜಡಿ ಮಳೆಗೆ ನಗರದಲ್ಲಿ ೧೦ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ನಗರದ ಜಯನಗರದ ಅಡಿಗಾಸ್ ಹೋಟೆಲ್ ಬಳಿ, ೭ನೇ ಬ್ಲಾಕ್, ಇಂದಿರಾನಗರ ಮತ್ತು ಹಲಸೂರು ಕೆರೆ ಬಳಿ, ನಾಗ ಚಿತ್ರಮಂದಿರ, ಡಾ.ರಾಜ್‌ಕುಮಾರ್ ರಸ್ತೆ, ಬಸವನಗುಡಿ ಮತ್ತು ಓಕಳಿಪುರಂನಲ್ಲಿ ಭಾರಿ ಗಾತ್ರದ ಮರಗಳು ಉರುಳಿದ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.

ಮಾತ್ರವಲ್ಲ ಹಳೆ ವಿಮಾನ ನಿಲ್ದಾಣ ರಸ್ತೆಯ ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಜೆ.ಪಿ. ನಗರದ ಎರಡನೆ ಹಂತದಲ್ಲಿ ಮರ ಧರೆಗುರುಳಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರ ತೆರವುಗೊಳಿಸಿ, ಸಂಚಾರ ಸುಗಮಗೊಳಿಸಿದರು.

Comments are closed.