ಅಂತರಾಷ್ಟ್ರೀಯ

ಪ್ರತಿದಿನ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಆರೋಗ್ಯಕ್ಕಾಗುವ ಲಾಭ ಏನು..? ಇದರಲ್ಲಿ ಹೆಚ್ಚು ಲಾಭ ಪಡೆಯುವವರು ಯಾರು…?

Pinterest LinkedIn Tumblr

health-benefits

ಲೈಂಗಿಕ ಕ್ರಿಯೆ ಎಂದರೆ ಮುಜುಗರ ಪಡುವುದು ಸಹಜ, ಆದರೆ ಈ ಲೈಂಗಿಕ ಕ್ರಿಯೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ ಅದರಲ್ಲಿಯೂ ಮಹಿಳೆಯರ ಆರೋಗ್ಯ ಉತ್ತಮಗೊಳ್ಳತ್ತದೆ ಎಂಬ ಸಂಗತಿ ಸಂಶೋಧನೆಯಿಂದ ತಿಳಿದುಬಂದಿದೆ. ಆ ಕುರಿತ ಮಾಹಿತಿ ಇಲ್ಲಿದೆ.

ಲೈಂಗಿಕ ಕ್ರಿಯೆ ಕುರಿತು ಹಲವಾರು ದೇಶಗಳಲ್ಲಿ ಬಹಿರಂಗವಾಗಿ ಚರ್ಚೆ ಮಾಡಲಾಗುತ್ತದೆ. ಆದರೆ ಕೆಲವು ದೇಶಗಳಲ್ಲಿ ಮುಕ್ತವಾಗಿ ಅದರ ಕುರಿತು ಮಾತನಾಡುವುದನ್ನು ನಿಷೇಧಿಸಲಾಗಿದೆ. ಅದಕ್ಕೆ ಕಾರಣ ಏನೇ ಇರಲಿ ಲೈಂಗಿಕ ಕ್ರಿಯೆಯಿಂದ ಗಂಡ ಹೆಂಡತಿ ನಡುವಿನ ಸಂಬಂಧ ಬಲಗೊಳ್ಳುವುದರ ಜೊತೆಗೆ ಆರೋಗ್ಯದ ದೃಷ್ಟಿಯಿಂದ ಉತ್ತಮ ಎನ್ನುವುದು ಸಂಶೋಧನೆಯ ವರದಿ.

ಪ್ರತಿದಿನ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ, ಅದರಲ್ಲಿಯೂ ಮಹಿಳೆಯರ ವಿಚಾರಕ್ಕೆ ಬಂದರೆ ಪುರುಷರಿಗಿಂತ ಮಹಿಳೆಯರಿಗೇ ಲೈಂಗಿಕ ಕ್ರಿಯೆಯಿಂದ ಹೆಚ್ಚು ಲಾಭವಿದೆ ಎಂದು ವರದಿ ತಿಳಿಸುತ್ತದೆ. ಈ ಕ್ರಿಯೆಯಿಂದ ಮಹಿಳೆಯರ ಒತ್ತಡ ಕಡಿಮೆಯಾಗಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗೂ ಚರ್ಮ ಕಾಂತಿಯುತವಾಗುತ್ತದೆ. ದೇಹದ ತೂಕ ನಿಯಂತ್ರಣದಲ್ಲಿರುತ್ತದೆ, ವಾರದಲ್ಲಿ ಎರಡರಿಂದ ಮೂರು ಬಾರಿ ಸಂಬಂಧ ಬೆಳೆಸುವುದರಿಂದ ಹೃದಯಾಘಾತ ಅಥವಾ ಪಾರ್ಶ್ವವಾಯು ಹೊಡೆಯುವುದಿಲ್ಲ, ಲೈಂಗಿಕ ಕ್ರಿಯೆಯಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಹಾರ್ಮೋನುಗಳ ಬಿಡುಗಡೆಯಿಂದ ಉಂಟಾಗುವ ನೋವುಗಳಿಂದಲೂ ಬಿಡುಗಡೆ ಹೊಂದಬಹುದಾಗಿದೆ ಎನ್ನುವುದು ಅಧ್ಯಯನದ ವರಧಿ.

Comments are closed.