ಕರ್ನಾಟಕ

ಮಹದಾಯಿ ರಾಜ್ಯದ ಪರ ಸಚಿವರ ವಿಶ್ವಾಸ

Pinterest LinkedIn Tumblr

18-1429339739-12-mbpatil-600x400ಬೆಂಗಳೂರು, ಜು. ೨೬- ನಾಳೆ ಹೊರಬೀಳಲಿರುವ ಮಹದಾಯಿ ನದಿ ವಿವಾದದ ಮಧ್ಯಂತರ ತೀರ್ಪು ರಾಜ್ಯದ ಪರವಾಗಿ ಬರುವ ವಿಶ್ವಾಸವನ್ನು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಕೃಷ್ಣಾ ಭಾಗ್ಯ ಜಲ ನಿಗಮದ ನಿರ್ದೇಶಕ ಮಂಡಳಿಯ 105 ನೇ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಪ್ರಕಟವಾಗಲಿರುವ ಮಹದಾಯಿ ನದಿ ವಿವಾದದ ಮಧ್ಯಂತರ ತೀರ್ಪು ರಾಜ್ಯದ ಪರವಾಗಿರಲಿದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.

ನಾಳಿನ ತೀರ್ಪು ಸಕಾರಾತ್ಮಕವಾಗಿ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.

ಸಭೆಯಲ್ಲಿ ಚರ್ಚೆ
ಇಂದು ನಡೆದ ಕೃಷ್ಣಾ ಜಲಭಾಗ್ಯ ನಿಗಮದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಜಲಭಾಗ್ಯ ನಿಗಮದ ಕಾಮಗಾರರಿಗಳ ಪ್ರಗತಿ, ಆಗಬೇಕಾಗಿರುವ ಕಾಮಗಾರಿಗಳು, ಹಣಕಾಸಿನ ಲಭ್ಯತೆ ಇವುಗಳೆಲ್ಲದರ ಬಗ್ಗೆಯೂ ಚರ್ಚೆಗಳು ನಡೆದವು.
ರಾಜ್ಯದ ಜಲಾಶಯಗಳಲ್ಲಿರುವ ನೀರಿನ ಸಂಗ್ರಹದಲ್ಲಿ ಎಷ್ಟು ನೀರನ್ನು ಕುಡಿ‌ಯುವ ನೀರಿಗೆ ಬಳಸಬೇಕು, ಎಷ್ಟು ನೀರಿನ ಪ್ರಮಾಣವನ್ನು ಕೃಷಿ ಚಟುವಟಿಕೆಗಳಿಗೆ ಬಳಸಬೇಕು ಎಂಬ ಬಗ್ಗೆಯೂ ಚರ್ಚೆಗಳು ನಡೆ‌ದವು.

Comments are closed.