ಅಂತರಾಷ್ಟ್ರೀಯ

ಹೆಚ್ಚು ಹೆಚ್ಚು ಸೆಕ್ಸ್ ಮಾಡುವುದರಿಂದ ನಿಮ್ಮ ಜನನಾಂಗ ಏನು ಆಗುತ್ತೆ ಗೊತ್ತಾ..? 

Pinterest LinkedIn Tumblr

Smiling Hispanic couple laying in bed

ಲಂಡನ್ : ಅತೀ ಹೆಚ್ಚು ಸೆಕ್ಸ್ ಮಾಡುವುದರಿಂದ ನಿಮ್ಮ ಜನನಾಂಗದಲ್ಲಿ ಹೊಸ ರೀತಿಯ ವ್ಯತ್ಯಾಸವಾಗುತ್ತದೆ ಎಂದು ಸಂಶೋಧಕರ ವರದಿಯೊಂದು ತಿಳಿಸಿದ್ದು, ಇದೊಂದು ರೀತಿಯಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಖುಷಿಯ ವಿಚಾರವು ಹೌದು.

ಹೆಣ್ಣು ಮತ್ತು ಗಂಡು ಪದೇಪದೆ ಮಿಲನದಲ್ಲಿ ತೊಡಗಿಕೊಳ್ಳುವಾಗ ಅವರ ಗಾತ್ರದಲ್ಲಿ ವ್ಯತ್ಯಾಸವಾಗುತ್ತದೆ. ಪುರುಷರ ಶಿಶ್ನದ ಗಾತ್ರವು ಹೆಚ್ಚು ಉದ್ದವಾದರೆ ಮಹಿಳೆಯರ ಜನನಾಂಗವು ವೃದ್ಧಿಸುತ್ತದೆಯಂತೆ.

ಲಂಡನಿನ ಎಕ್ಸಿಟೇರ್ ವಿಶ್ವವಿದ್ಯಾಲಯವು ಜೀರುಂಡೆಗಳ ಜೋಡಿಗಳು ನಡೆಸುವ ಮಿಲನದ ಮೇಲೆ ಸಂಶೋಧನೆ ನಡೆಸಿ ಈ ಅಭಿಪ್ರಾಯ ಮಂಡಿಸಿದೆ. ಜೀರುಂಡೆಗಳು ಒಂದು ಸಮಯದ ನಂತರ ಮತ್ತೊಂದು ಅವಧಿಗೆ ಮಿಲನ ನಡೆಸಿದ ನಂತರ ಅವುಗಳ ಜನನಾಂಗದಲ್ಲಿ ಆಗುವ ಬದಲಾವಣೆಗಳೇನು ಎಂಬುದರ ಬಗ್ಗೆ ಸಂಶೋಧನೆ ನಡೆಸಲಾಗಿದೆ.

‘ಹೆಣ್ಣು, ಗಂಡು ಜೀರುಂಡೆಗಳ 10 ಸಂತತಿಯ ಮೇಲೆ ಸಂಶೋಧನೆ ನಡೆಸಿದಾಗ ಆ ಜೋಡಿಗಳ ಜನನಾಂಗದ ಗಾತ್ರದಲ್ಲಿ ಭಾರಿ ವ್ಯತ್ಯಾಸವಾಗಿತ್ತು. ಈ ವ್ಯತ್ಯಾಸ ಮನುಷ್ಯರಲ್ಲೂ ಉಂಟಾಗುತ್ತದೆ’ ಎಂದು ಲಂಡನಿನ ಎಕ್ಸಿಟೇರ್ ವಿಶ್ವವಿದ್ಯಾಲಯದ ಪೌಲ್ ಹೋಪ್’ವುಡ್ ಹೇಳುತ್ತಾರೆ. ಸಂಶೋಧಕರ ತಂಡ ಈ ವರದಿಯನ್ನು ‘ಜರ್ನಲ್ ಎವಲ್ಯೂಷನ್’ ಎಂಬ ಸಂಶೋಧನಾ ಗ್ರಂಥದಲ್ಲಿ ಪ್ರಕಟಿಸಿದೆ.

Comments are closed.