
ನವದೆಹಲಿ: ಪೂರ್ವ ದೆಹಲಿಯ ಮಯೂರ್‍ವಿಹಾರ್‍ನ ಸಮಾಚಾರ್ ಅಪಾರ್ಟ್‍ಮೆಂಟ್‍ನಲ್ಲಿ ನಡೆದ ನಿವೃತ್ತ ಅಧಿಕಾರಿಯೊಬ್ಬನ ಬರ್ಬರ ಹತ್ಯೆ ಪ್ರಕರಣವನ್ನು ಕೊನೆಗೂ ಪೊಲೀಸರು ಭೇದಿಸಿದ್ದಾರೆ.
25 ವರ್ಷದ ಮಹಿಳೆಯೊಬ್ಬಳನ್ನು ಬಂಧಿಸಿದ ನಂತರ ಈ ಭೀಕರ ಕೊಲೆಯ ರಹಸ್ಯ ಬಯಲಾಗಿದೆ. ನಿವೃತ್ತ ಅಧಿಕಾರಿ ಹಾಗೂ ಅವನ ಸ್ನೇಹಿತರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದರು. ಅದನ್ನು ಚಿತ್ರೀಕರಿಸಿಕೊಂಡು ಬ್ಲಾಕ್‍ಮೇಲ್ ಮಾಡುತ್ತಿದ್ದ ಅಧಿಕಾರಿ ಮೇಲೆ ಸಿಟ್ಟಿನಿಂದ ಇರಿದು ಕೊಲೆ ಮಾಡಿದೆ ಎಂದು ಬಂಧಿತ ಮಹಿಳೆ ಮಾಹಿತಿ ನೀಡಿದ್ದಾಳೆ. ನಿವೃತ್ತ ಅಧಿಕಾರಿ ಪಿ.ಬಿ.ವಿಜಯಕುಮಾರ್ ಅವರ ಮನೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದಾಗ ಪೊಲೀಸರಿಗೆ, ಆ ಮನೆಯಿಂದ ಮಹಿಳೆಯೊಬ್ಬಳು ಟಿವಿ ಕೊಂಡೊಯ್ಯುತ್ತಿರುವುದು ಪತ್ತೆಯಾಗಿದೆ.
ಇದನ್ನು ಆಧರಿಸಿ ಪೊಲೀಸರು ಮಹಿಳೆಯನ್ನು ಬಂಧಿಸಿದಾಗ ಆಕೆ ಕೊಲೆಯ ರಹಸ್ಯ ಬಿಚ್ಚಿಟ್ಟಿದ್ದಾಳೆ. ಕೇಂದ್ರ ಸರ್ಕಾರದ ಆರೋಗ್ಯ ಖಾತೆಯಲ್ಲಿ ಅಧಿಕಾರಿಯಾಗಿದ್ದ ವಿಜಯ್‍ಕುಮಾರ್ 2011ರಲ್ಲಿ ನಿವೃತ್ತನಾಗಿದ್ದ. ಪೂರ್ವ ದೆಹಲಿಯ ಮಯೂರ್ ವಿಹಾರ್‍ನ ಫ್ಲಾಟ್‍ನಲ್ಲಿ ವಾಸವಾಗಿದ್ದ. ಈ ವ್ಯಕ್ತಿ ಹಾಗೂ ಇತರರು ಮಹಿಳೆಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಅದನ್ನು ಚಿತ್ರೀಕರಿಸಿಕೊಂಡು ಅವಳನ್ನು ಬ್ಲಾಕ್‍ಮೇಲ್ ಮಾಡುತ್ತಿದ್ದರು. ಯಾರಿಗಾದರೂ ವಿಷಯ ತಿಳಿಸಿದರೆ ಅದನ್ನು ವೆಬ್‍ಸೈಟ್‍ಗೆ ಹಾಕುವುದಾಗಿ ಹೆದರಿಸುತ್ತಿದ್ದ ಅಧಿಕಾರಿಯ ಮೇಲೆ ಭಾರೀ ಸಿಟ್ಟು ಇತ್ತು. ಈ ಹಿನ್ನೆಲೆಯಲ್ಲಿ ವಿಜಯ್‍ಕುಮಾರ್‍ನನ್ನು ಇರಿದು ಕೊಲೆ ಮಾಡಿದೆನೆಂದು ಮಹಿಳೆ ತಿಳಿಸಿದ್ದಾಳೆ ಎಂದು ದೆಹಲಿ(ಪೂರ್ವ) ಡಿಸಿಪಿ ರಿಶಿಪಾಲ್ ಹೇಳಿದ್ದಾರೆ.
Comments are closed.