ರಾಷ್ಟ್ರೀಯ

ಬಿಪಿಎಲ್ ಪಟ್ಟಿಯಲ್ಲಿ ಮಾಜಿ ಸಿಎಂ ದಿಗ್ವಿಜಯ್‍ಸಿಂಗ್ ಕುಟುಂಬ

Pinterest LinkedIn Tumblr

diggi

ಪಣಜಿ: ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‍ಸಿಂಗ್ ಮತ್ತು ಅವರ ಕುಟುಂಬದವರ ಹೆಸರು ಕಡುಬಡವರ (ಬಿಪಿಎಲ್) ಪಟ್ಟಿಯಲ್ಲಿ..! ನಿಜ, ತಮ್ಮ ಮತ್ತು ಕುಟುಂಬದವರ ಹೆಸರುಗಳನ್ನು ಬಿಪಿಎಲ್ ಪಟ್ಟಿಯಲ್ಲಿ ಸೇರಿರುವುದನ್ನು ಕಂಡು ದಿಗ್ವಿಜಯ್‍ಸಿಂಗ್ ತಬ್ಬಿಬ್ಬಾಗಿದ್ದಾರೆ. ಮಧ್ಯ ಪ್ರದೇಶ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು, ನಾನು, ನನ್ನ ಸಹೋದರ ಹಾಗೂ ನನ್ನ ಮಗನ ಹೆಸರುಗಳನ್ನು ಬಿಪಿಎಲ್ ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಿವೆ. ನಾವು ನಮ್ಮ ಹೆಸರು ಸೇರಿಸಿಯೂ ಇಲ್ಲ.

ಬಿಪಿಎಲ್ ಸವಲತ್ತುಗಳನ್ನೂ ಪಡೆದಿಲ್ಲ. ಇದು ನಾನು ಮತ್ತು ನನ್ನ ಕುಟುಂಬದ ವಿರುದ್ಧದ ಪಿತೂರಿಯಾಗಿದ್ದು, ಇದಕ್ಕೆ ಕಾರಣ ಕರ್ತರಾದವರು ಯಾರೇ ಇದ್ದರೂ ಅವರು ಕ್ಷಮಾಪಣೆ ಕೇಳಬೇಕು ಮತ್ತು ಅವರನ್ನು ಶಿಕ್ಷೆಗೊಳಪಡಿಸಬೇಕು ಎಂದು ಅವರು ಟ್ವೀಟ್ ಮಾಡಿದ್ದಾರೆ. ಗೋವಾ ಕಾಂಗ್ರೆಸ್‍ನ ಪದಾಧಿಕಾರಿಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಲು ಹಿರಿಯ ನಾಯಕ ದಿಗ್ವಿಜಯ್ (69) ಇಂದಿಲ್ಲಿಗೆ ಆಗಮಿಸಿದ್ದಾರೆ.

Comments are closed.