ಕರಾವಳಿ

ಮಂಗಳೂರು :ಸಾಲದ ಹೊರೆಗೆ ತತ್ತರಿಸಿ ಅವಿವಾಹಿತ ಯುವತಿ ನೇಣು ಬಿಗಿದು ಆತ್ಮಹತ್ಯೆ

Pinterest LinkedIn Tumblr

sowmya_Sucide_Padil

ಮಂಗಳೂರು, ಜು.21 : ಅವಿವಾಹಿತ ಯುವತಿಯೋರ್ವಳು ತಾನು ವಾಸ್ತವ್ಯಹೊಂದಿರುವ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಗೊಂಡ ದುರಂತ ಘಟನೆಯೊಂದು ನಗರದ ಅಳಪೆ ಪಡೀಲ್ ಕರ್ಮಾರ್ ನಲ್ಲಿ ಬುಧವಾರ ಸಂಭವಿಸಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯನ್ನು ಅಳಪೆ ಪಡೀಲ್ ಕರ್ಮಾರ್ ನಲ್ಲಿರುವ ಮಾಜಿ ಶಾಸಕರೊಬ್ಬರ ಬಾಡಿಗೆ ಮನೆ ನಿವಾಸಿ ಸೌಮ್ಯ (27) ಎಂದು ಗುರುತಿಸಲಾಗಿದೆ. ಸಾಲದ ಹೊರೆಯಿಂದ ತತ್ತರಿಸಿ ಈ ಯುವತಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.

ನಗರದ ಮಾಲ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಸೌಮ್ಯ ಹಲವರಿಂದ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದು, ಅದನ್ನು ವಾಪಸ್ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಜೀವನದಲ್ಲಿ ಜುಗುಪ್ಸೆಗೊಂಡ ಆಕೆ ನಿನ್ನೆ ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

ಆಕೆ ಡೆತ್ ನೋಟ್ ವೊಂದನ್ನು ಬರೆದಿಟ್ಟಿದ್ದು, ತಾನು ಹಲವರಿಂದ ಸಾಲವನ್ನು ಪಡೆದುಕೊಂಡಿದ್ದು, ಮರುಪಾವತಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ ಎನ್ನಲಾಗಿದೆ. ಸೌಮ್ಯರ ಸಹೋದರಿ ಹೈದಾರ್‌ಬಾದ್ ನಲ್ಲಿ ಉದ್ಯೋಗದಲ್ಲಿದ್ದು, ಸದ್ಯದಲ್ಲೇ ಮಂಗಳೂರು ತಲುಪಲಿದ್ದಾರೆ ಎಂದು ತಿಳಿದು ಬಂದಿದೆ.

ಶವವನ್ನು ನಗರದ ಸರಕಾರಿ ವೆನ್‌ಲಾಕ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ಪ್ರಕರಣ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Comments are closed.