
ಬೆಂಗಳೂರು: ಸೂಪರ್ ಸ್ಟಾರ್ ರಜನಿ ಅಭಿನಯದ ಕಬಾಲಿ ಚಿತ್ರವನ್ನು ಸ್ಟಾರ್ ಹೋಟೆಲ್ ಗಳಲ್ಲಿ ಪ್ರದರ್ಶಿಸಲು ಹಲವಾರು ತೊಡರುಗಳು ಎದುರಾಗಿದ್ದು ತಿಳಿದಿರುವ ವಿಚಾರವೇ. ಮುಸುಕಿನ ಗುದ್ದಾಟದ ನಡುವೆಯೂ ಸಹ ಚಲನಚಿತ್ರ ವಾಣಿಜ್ಯ ಮಂಡಳಿ, ಪ್ರದರ್ಶಕರು , ಹಾಗೂ ನಿರ್ಮಾಪಕರು ಡಿ.ಸಿ.ಯಲ್ಲಿ ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ಡಿ.ಸಿ.ಯವರು ಇದು ಕಾನೂನು ಭಾಹಿರ ಪ್ರದರ್ಶನ ಎಂದು ಇದಕ್ಕೆ ತಡೆ ನೀಡಿದ್ದಾರೆ.
ಈ ವಿಚಾರವಾಗಿ ಖುದ್ದಾಗಿ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ ಗೋವಿಂದೂರು ಫೋನ್ ಮೂಲಕ ಡಿಸಿಯವರನ್ನು ವಿಚಾರಿಸಿದಾಗ ಸ್ಟಾರ್ ಹೋಟೆಲ್ ಗಳಲ್ಲಿ ಚಿತ್ರ ಪ್ರದರ್ಶನ ಮಾಡುವುದಕ್ಕೆ ಅನುಮತಿ ನೀಡಿಲ್ಲ ಎಂದು ಖಚಿತಪಡಿದ್ದಾರಂತೆ.
ಅಂತೂ ಇಂತೂ ಮಾಲ್, ಸ್ಟಾರ್ ಹೋಟೆಲ್ ಗಳಲ್ಲಿ ಭಕ್ಷ ಭೋಜನದ ಜೊತೆಗೆ ಕಬಾಲಿ ಚಿತ್ರವನ್ನು ವೀಕ್ಷಿಸಲು ಸಾವಿರಗಟ್ಟಲೆ ಹಣವನ್ನು ನೀಡಿದಂತ ಚಿತ್ರಪ್ರೇಮಿಗಳಿಗೆ ಭಾರಿ ನಿರಾಸೆಯಾಗಿದೆ. ಈಗಾಗಲೇ ಟೆಕೆಟ್ ನ್ನು ಮಾರಾಟ ಮಾಡಿದವರು ಹಣವನ್ನು ಮರುಪಾವತಿಸಲು ಯಾವ ದಾರಿಯನ್ನು ಹುಡುಕಿದ್ದಾರೆಯೋ ಆ ದೇವರೇ ಬಲ್ಲ. ಇದೇ ಸಂದರ್ಭದಲ್ಲಿ ಮಾಲ್ ಗಳಲ್ಲಿ ೧೫೦ರೂಗಳಿಗೂ ಹೆಚ್ಚು ಟಿಕೆಟ್ ಬೆಲೆ ಇರಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
Comments are closed.