ರಾಷ್ಟ್ರೀಯ

ಉ.ಪ್ರ.: ಕಳ್ಳಬಟ್ಟಿ ಸಾರಾಯಿಗೆ 21 ಬಲಿ,ಐವರು ಅಧಿಕಾರಿಗಳ ಅಮಾನತು

Pinterest LinkedIn Tumblr

Liquor-Store-Alexandria-KY_0ಇಟಾ (ಉ.ಪ್ರ): ಕಳ್ಳಬಟ್ಟಿ ಸಾರಾಯಿ ಸೇವಿಸಿ 21 ಮಂದಿ ಮೃತಪಟ್ಟ ಘಟನೆ ಇಲ್ಲಿನ ಅಲಿಗಂಜ್‌ನಲ್ಲಿ ಸಂಭವಿಸಿದೆ. ಸಾರಾಯಿ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದವರ ಪೈಕಿ ಶನಿವಾರ ಐವರು ಸಾವನ್ನಪ್ಪಿದ್ದರು, ಭಾನುವಾರ ಸಾವನ್ನಪ್ಪಿದವರ ಸಂಖ್ಯೆ 21ಕ್ಕೇರಿದೆ.

6 ಮಂದಿಯ ದೃಷ್ಟಿ ಹೋಗಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಮೂವರು ಅಬಕಾರಿ ಇಲಾಖೆಯವರನ್ನು ಸೇರಿ ಐವರು ಸರ್ಕಾರಿ ನೌಕರರನ್ನು ಅಮಾನತು ಮಾಡಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರು ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.
-ಉದಯವಾಣಿ

Comments are closed.