ಮಾಲೆಗಾಂವ್ : 2002 ರಲ್ಲಿ ಗೋಧ್ರಾ ದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹಚ್ಚಿ 59 ಜನರ ಸಾವಿಗೆ ಕಾರಣವಾಗಿ, 14 ವರ್ಷಗಳ ಕಾಲ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಇಮ್ರಾನ್ ಬುಟಕ್‌ನನ್ನು ಅಹಮದಾಬಾದ್‌ನ ಕ್ರೈಂ ಬ್ರಾಂಚ್ ಪೊಲೀಸರು ಬುಧವಾರ ವಶಕ್ಕೆ ಪಡೆಯುವಲ್ಲಿ ಯಶಸ್ವೀಯಾಗಿದ್ದಾರೆ.
2002 ರಿಂದ ತಲೆ ಮರೆಸಿಕೊಂಡಿದ್ದ ಬುಟಕ್ ಮಾಲೆಗಾಂವ್‌ನಲ್ಲಿ ಅಕ್ರಮ ಮರಳು ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರೈಲಿಗೆ ಬೆಂಕಿ ಹಚ್ಚಿದ ಪರಿಣಾಮವಾಗಿ ಅಯೋಧ್ಯೆಯಿಂದ ಮರಳುತ್ತಿದ್ದ 59 ಮಂದಿ ಆರ್‌ಎಸ್‌ಎಸ್ ಮತ್ತು ವಿಎಚ್‌ಪಿ ಕಾರ್ಯಕರ್ತರು ಸಜೀವವಾಗಿ ದಹನಗೊಂಡಿದ್ದರು. ಇದೇ ಘಟನೆ ಗೋಧ್ರಾ ಕೋಮು ಗಲಭೆಗೆ ಕಾರಣವಾಗಿ ಸಾವಿರಾರು ಜನ ಸಾವನ್ನಪ್ಪಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡ ಕೆಲ ಪ್ರಮುಖ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು ಮೇ ತಿಂಗಳಿನಲ್ಲಿ ಪ್ರಮುಖ ಆರೋಪಿಯಾಗಿದ್ದ ಫಾರೂಕ್ ಮಹಮದ್ ಅಲಿಯಾಸ್ ಭನಾನನ್ನು ಬಂಧಿಸಲಾಗಿತ್ತು. ಕಳೆದ ವರ್ಷ ಎಟಿಎಸ್ ಪೊಲೀಸರು ಪ್ರಮುಖ ಆರೋಪಿಗಳಾದ ಕಸಮ್ ಇಬ್ರಾಹಿಂ ಭಾಮೇದಿ ,ಖಾದಿರ್ ಅಬ್ದುಲ್ ಗನಿ, ಹುಸೇನ್ ಸುಲೇಮಾನ್ ಮೌಹಾನ್ ಎನ್ನುವವರನ್ನು ವಶಕ್ಕೆ ಪಡೆದಿದ್ದರು.
-ಉದಯವಾಣಿ
Comments are closed.