ಅಹಮದಾಬಾದ್: ಮಂಗಳವಾರ ತಡರಾತ್ರಿ ಗುಜರಾತ್‍ನ ಬೀದಿಗಳಲ್ಲಿ 8 ಸಿಂಹಗಳು ಕಾಣಿಸಿಕೊಂಡಿರುವ ವಿಡಿಯೋ ವಾಟ್ಸಾಪ್‍ನಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಇಲ್ಲಿನ ಜುನಾಗಢ್ ನಗರದಲ್ಲಿ ಎರಡು ಮರಿಗಳು ಸೇರಿದಂತೆ ಒಟ್ಟು 8 ಸಿಂಹಗಳು ನಡುರಸ್ತೆಯಲ್ಲಿ ಓಡಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಪ್ರತ್ಯೇಕ ಘಟನೆಯೊಂದರಲ್ಲಿ ಗಿರ್ ಅರಣ್ಯ ಪ್ರದೇಶದ ಬಳಿಯಿರುವ ಅಮ್ರೇಲಿ ಜಿಲ್ಲೆಯಲ್ಲಿ ಆಡುಗಳನ್ನು ಮೇಯಿಸುತ್ತಿದ್ದ ಗ್ರಾಮಸ್ಥನ ಮೇಲೆ 3 ಸಿಂಹಗಳು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿವೆ. ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಅಂತ ವರದಿಯಾಗಿದೆ.
ಮಾರ್ಚ್‍ನಿಂದ ಮೇ ವರೆಗೆ ಈ ಭಾಗದಲ್ಲಿ ಸಿಂಹಗಳ ದಾಳಿಯಿಂದಾಗಿ ಮೂವರು ಸಾವನ್ನಪ್ಪಿದ್ದಾರೆ.
Comments are closed.