ಮನೋರಂಜನೆ

ಬಾಲಿವುಡ್ ಕ್ವೀನ್ ಕಂಗನಾ ರನೌತ್ ಆರೋಪಕ್ಕೆ ಹೃತಿಕ್ ರೋಷನ್ ತಿರುಗೇಟು ! ಏನು ಹೇಳಿದ್ರು ಮುಂದಿದೆ ನೋಡಿ…

Pinterest LinkedIn Tumblr

hrithik

ಮುಂಬೈ: ತನ್ನ ಖಾಸಗಿ ಪೋಟೋಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂಬ ಬಾಲಿವುಡ್ ಕ್ವೀನ್ ಕಂಗನಾ ರನೌತ್ ಆರೋಪಕ್ಕೆ ಇದೀಗ ಹೃತಿಕ್ ರೋಷನ್ ತಿರುಗೇಟು ನೀಡಿದ್ದು, ಪ್ರಕರಣದ ಸತ್ಯ ಶೀಘ್ರವೇ ಬೆಳಕಿಗೆ ಬರಲಿದ್ದು, ಯಾರು ತಪ್ಪಾಗಿ ನಡೆದುಕೊಂಡಿದ್ದಾರೆ ಎಂದು ತಿಳಿಯಲಿದೆ ಎಂದು ತಿಳಿಸಿದ್ದಾರೆ.

ತಮ್ಮ ಮುಂಬರುವ ಚಿತ್ರ ‘ಮೊಹೆಂಜೊ ದಾರೋ’ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಹೃತಿಕ್, ಕಂಗನಾ ಅವರ ಆರೋಪದಲ್ಲಿ ಹುರುಳಿಲ್ಲ. ಈ ವಿಚಾರವಾಗಿ ಹಲವರು ನನ್ನನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಸೂಕ್ತ ಉತ್ತರ ಸದ್ಯದಲ್ಲಿಯೇ ದೊರೆಯಲಿದೆ. ಎಲ್ಲ ಸದ್ಗುಣಗಳ ತಾಯಿ ತಾಳ್ಮೆ ಎನ್ನುವುದನ್ನು ಅರಿತು ನಾನು ಸಾಗುತ್ತಿದ್ದೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಈ ಹಿಂದೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಕಂಗನಾ ಹೃತಿಕ್ ತನ್ನ ಖಾಸಗಿ ಪೋಟೋಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ದೂರಿದ್ದರು. ಅಷ್ಟೇ ಅಲ್ಲ ಈ ವಿಚಾರವಾಗಿ ಕಂಗನಾ ಆತನ ವಿರುದ್ಧ ಎಫ್ಐಆರ್ ದಾಖಲಿಸುವಂತೆ ವಕೀಲರ ಮೂಲಕ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಕಂಗನಾ ಅವರ ವಕೀಲರು ಪೊಲೀಸ್ ಮುಖ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದು, ಕಂಗನಾ ಅಂದು ಕಳುಹಿಸಿದ್ದ ಖಾಸಗಿ ಇ ಮೇಲ್ಗಳನ್ನು ಹೃತಿಕ್ ರೋಷನ್ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದರು. ಐಪಿಸಿ 151ರ ಅಡಿಯಲ್ಲಿ ಆರೋಪಿಯನ್ನು ಬಂಧಿಸಿ, ಐಪಿಸಿ 149 ಮತ್ತು 150 ಅಡಿಯಲ್ಲಿ ತನಿಖೆ ನಡೆಸುವಂತೆಯೂ ಕೋರಿಕೊಂಡಿದ್ದರು.

Comments are closed.