
ಮಂಗಳೂರು,ಜುಲೈ.13 : ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಬಜಿಲಕೇರಿ ನಿವಾಸಿ ಶೈಲೇಶ್ ಗಾಣಿಗ @ ಶೈಲೇಶ @ ಶೈಲು (25) ಎಂಬ ಆರೋಪಿಯನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿರುವ ಉತ್ತರ ಪೊಲೀಸ್ ಠಾಣಾ ಪೊಲೀಸರು ಇದೀಗ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.
ಶೈಲೇಶ್ ಗಾಣಿಗ ಕೊಲೆ, ಸುಲಿಗೆ, ಕೊಲೆಯತ್ನ, ದೊಂಬಿ, ಹಲ್ಲೆ ಮುಂತಾದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಈತನ ಮೇಲೆ ಮಂಗಳೂರು ನಗರದಾದ್ಯಂತ ವಿವಿದ ಠಾಣೆಗಳಲ್ಲಿ ಸುಮಾರು 12 ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಈತನ ಅಪರಾಧ ಕೃತ್ಯವನ್ನು ನಿಯಂತ್ರಿಸಲು ಉತ್ತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶಾಂತಾರಾಮ್ ರವರು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ವರದಿ ನಿವೇದಿಸಿಕೊಡಿದ್ದು ,ವರದಿಯ ಆಧಾರದ ಮೇರೆಗೆ ಪೊಲೀಸ್ ಆಯುಕ್ತರು ಈತನ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಬಂಧಸಲು ಆಜ್ಞೆಯನ್ನು ಹೊರಡಿಸಿದ್ದರು.
Comments are closed.