ಕರಾವಳಿ

ಅಂಗನವಾಡಿ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ; ಕೇಂದ್ರ, ರಾಜ್ಯ ಸರ್ಕಾರಗಳ ಪ್ರತಿಕೃತಿ ದಹನ

Pinterest LinkedIn Tumblr

ಕುಂದಾಪುರ: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ರಿ., (ಸಿ.ಐ.ಟಿ.ಯು) ಕುಂದಾಪುರ ತಾಲೂಕು ಸಮಿತಿ ವತಿಯಿಂದ ೧೧ ಜುಲೈ ೨೦೧೬ ಅಖಿಲ ಭಾರತ ಐಸಿಡಿ‌ಎಸ್ ಬೇಡಿಕಾ ದಿನಾಚರಣೆ ಅಂಗವಾಗಿ ಕುಂದಾಪುರದ ಶಾಸ್ತ್ರೀ ವೃತ್ತದ ಸಮೀಪ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರತಿಕೃತಿಗಳ ದಹನ ಮಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಂಕೇತಿಕ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದರು.

Anganavadi_Noukara_Protest (1) Anganavadi_Noukara_Protest (2) Anganavadi_Noukara_Protest (3) Anganavadi_Noukara_Protest (4) Anganavadi_Noukara_Protest (5) Anganavadi_Noukara_Protest (6) Anganavadi_Noukara_Protest (7) Anganavadi_Noukara_Protest (8) Anganavadi_Noukara_Protest (9) Anganavadi_Noukara_Protest (10) Anganavadi_Noukara_Protest (11)

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ರಿ., (ಸಿ.ಐ.ಟಿ.ಯು) ಅಧ್ಯಕ್ಷೆ ರತಿ ಶೆಟ್ಟಿ ಅವರು, ಅಂಗನವಾಡಿ ಕೇಂದ್ರಗಳನ್ನು ಶಿಶುಪಾಲನಾ ಕೇಂದ್ರಗಳನ್ನಾಗಿ ಪರಿವರ್ತಿಸಿ ಐ.ಸಿ.ಡಿ.ಎಸ್ ನ್ನು ಪ್ರತ್ಯೇಕ ನಿರ್ದೇಶನಾಲಯವನ್ನು ಮಾಡಬೇಕು. ಐ.ಸಿ.ಡಿ.ಎಸ್ ಯೋಜನೆಯನ್ನು ಖಾಯಂ ಮಾಡಬೇಕೆಂದು ಹಲವು ವರ್ಷಗಳಿಂದ ಅಂಗನವಾಡಿ ನೌಕರರು ಹೋರಾಟ ನಡೆಸುತ್ತಿದ್ದಾರೆ. ಉದಾರೀಕರಣದ ನೀತಿಗಳ ಭಾಗವಾಗಿ ಈ ಯೋಜನೆಯನ್ನು ಪುನರ್‌ರಚಿಸುವ ಮತ್ತು ಬಲ ಪಡಿಸುವ ಹೆಸರಲ್ಲಿ ಮಿಷನ್ ಮೋಡ್ ಆಗಿ ಪರಿವರ್ತಿಸಲಾಗುತ್ತಿದೆ. ಬೇರೆ ರಾಜ್ಯಗಳಲ್ಲಿ ಇದನ್ನು ಜ್ಯಾರಿ ಮಾಡದಿದ್ದರೂ ನಮ್ಮ ರಾಜ್ಯದಲ್ಲಿ ಮಿಷನ್ ಮೋಡ್ ಜ್ಯಾರಿ ಮಾಡಲು ಹೊರಟಿದೆ. ರಾಜ್ಯ ಮಕ್ಕಳ ಅಭಿವೃದ್ದಿ ಸಂಸ್ಥೆ ಎಂದು ನೊಂದಾವಣೆ ಮಾಡಿಸಿ ಇದರಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಸಹಾಯವನ್ನು ತಗೆದುಕೊಳ್ಳಲು ತೀರ್ಮಾನಿಸಿದೆ. ಮಿಷನ್ ಮೋಡ್ ನಿರ್ದಿಷ್ಟ ಗುರಿ ಸಾಧಿಸಿದ ಮೇಲೆ ಈ ಯೋಜನೆಯ ಪರಿಸ್ಥಿತಿ ಏನು ಎಂದು ಅವರು ಪ್ರಶ್ನಿಸಿ, ಮಿಷನ್ ಮೋಡ್ ಹೆಸರಲ್ಲಿ‌ಇ ಐ.ಸಿ.ಡಿ.ಎಸ್‌ನ್ನು ಖಾಸಗಿಕರಣ ಮಾಡಬಾರದು ಎಂದು ಆಗ್ರಹಿಸಿದರು.

ಸೇವಾ ಜೇಷ್ಠತೆ ಆಧಾರದಲ್ಲಿ ವೇತನ ರೂ.೨೦೦೦೦ನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ರೂ.೧೭೦೦೦ವನ್ನು ಸಹಾಯಕಿಯರಿಗೆ ನೀಡಬೇಕು. ಅಂಗನವಾಡಿ ನೌಕರರ ಈ ಸಂಭಾವನೆಯು ಗ್ರಾಹಕರ ಬೆಲೆ ಸೂಚ್ಯಂಕಕ್ಕೆ ಸಂಬಂಧಿಸಿರಬೇಕು, ಎಲ್ಲಾ ಅಂಗನಾಡಿ ಕಾರ್ಯಕರ್ತೆಯರನ್ನು ಸರ್ಕಾರದ ೩ನೇ ದರ್ಜೆ ನೌಕರರು, ಸಹಾಯಕಿಯರನ್ನು ೪ನೇ ದರ್ಜೆ ನೌಕರರು ಎಂದು ಪರಿಗಣಿಸಬೇಕು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಭಡ್ತಿಗಿರುವ ನಿಯಮಗಳನ್ನು ಬದಲಾಯಿಸಬೇಕು, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳು ಪ್ರವೇಶ ಪಡೆಯಲು ಅಂಗನವಾಡಿ ಬಿಡುಗಡೆ ಮಾಡಿದ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾ ನಿರತರು ಒತ್ತಾಯಿಸಿದರು.
ಕುಂದಾಪುರ ನಗರದಲ್ಲಿ ಸಾಗಿ ಬಂದ ಪ್ರತಿಭಟನಾ ಮೆರವಣಿಗೆ ತಹಶೀಲ್ದಾರ್ ಕಛೇರಿಯಲ್ಲಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ರಿ., (ಸಿ.ಐ.ಟಿ.ಯು) ಪ್ರಧಾನ ಕಾರ್ಯದರ್ಶಿ ಚಂದ್ರಾವತಿ, ಖಜಾಂಚಿ ಬಿ.ಆಶಾಲತಾ ಶೆಟ್ಟಿ, ಸಿ‌ಐಟಿಯು ತಾಲೂಕು ಅಧ್ಯಕ್ಷ ಎಚ್. ನರಸಿಂಹ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಕೋಶಾಧಿಕಾರಿ ಲೀಲಾವತಿ, ಅಂಗನವಾಡಿ ಯೂನಿಯನ್ ಮುಖಂಡರಾದ ಸಬಿತಾ ಶೆಟ್ಟಿ, ಕೃಷಿ ಕೂಲಿಕಾರರ ಸಂಘದ ನಾಗರತ್ನ , ಎಂ.ಬಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

Comments are closed.