ಅಂತರಾಷ್ಟ್ರೀಯ

ಮಳೆಗಾಲದ ಸೌಂದರ್ಯಕ್ಕೆ ಟಿಪ್ಸ್…..

Pinterest LinkedIn Tumblr

Face-3

ನಮ್ಮ ಚರ್ಮದ ಆರೈಕೆ ಅತ್ಯಂತ ಅವಶ್ಯಕ. ಆರೈಕೆ ಮಾಡದೇ ಹೋದರೆ ಚರ್ಮ ತೀರಾ ಒಣಗಿ ಸೀಳತೊಡಗುತ್ತದೆ. ಮಳೆಗಾಲದಲ್ಲಿಯೂ ಚರ್ಮ ಸೀಳುವುದು ಅಥವಾ ಪರೆ ಏಳುವುದು ಮೊದಲಾದ ತೊಂದರೆಗೆ ಒಳಗಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಮಳೆಗಾಲದಲ್ಲಿ ಮಳೆ ಇದ್ದರೂ ಗಾಳಿಯಲ್ಲಿ ಆರ್ದ್ರತೆ ಇಲ್ಲದಿರುವುದು. ಅಂದರೆ ನೀರಹನಿ ಆವಿಯಾಗದೇ ಗಾಳಿಗೆ ಬರುವುದೇ ಇಲ್ಲ. ಹಾಗಾಗಿ ಗಾಳಿ ಒಣಗಿರುತ್ತದೆ. ಬಟ್ಟೆಗಳು ಒಣಗದಿರಲೂ ಇದೇ ಕಾರಣ.

ಇದರ ಕೊರತೆಯಿಂದ ಚರ್ಮ ಕಳೆಗುಂದುವುದು ಮಾತ್ರವಲ್ಲ, ಚಿಕ್ಕ ಗುಳ್ಳೆಗಳು ಏಳುವುದು, ಮೊಡವೆಗಳು ಮತ್ತು ಚರ್ಮ ಕೆಂಪಗಾಗುವ ತೊಂದರೆಯನ್ನೂ ಎದುರಿಸಬೇಕಾಗುತ್ತದೆ. ಇದಕ್ಕೆ ತಕ್ಕ ಮದ್ದು ಎಂದರೆ ದಿನಕ್ಕೆ ಕನಿಷ್ಠ ಎಂಟು ಲೋಟಗಳಾದರೂ ನೀರು ಕುಡಿಯುವುದು. ಮಳೆಗಾಲದಲ್ಲಿ ಬಾಯಾರಿಕೆಯಾಗದ ಕಾರಣ ನಾವೆಲ್ಲಾ ಸೋಮಾರಿಗಳಾಗಿ ನೀರು ಕುಡಿಯದೇ ಚರ್ಮ ಒಣಗಲು ಪ್ರತ್ಯಕ್ಷರಾಗಿ ಕಾರಣರಾಗುತ್ತೇವೆ.

*ಕೊಂಚ ಹುಣಸೆಹುಳಿಯನ್ನು ನೀರಿನಲ್ಲಿ ಕಿವುಚಿ ಇದನ್ನು ಮುಖ, ಕೈ, ಪಾದ, ಕುತ್ತಿಗೆಯ ಚರ್ಮದ ಮೇಲೆ ಸವರಿ ಒಣಗಲು ಬಿಡಿ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್‌ಗಳು ಮುಂದಿನ ಕೆಲಸ ನೋಡಿಕೊಳ್ಳುತ್ತವೆ. ಇದರಿಂದ ಆರ್ದ್ರತೆಯ ಕೊರತೆಯಿಂದಾಗಿ ಬಾಡಿದ್ದ ಚರ್ಮ ಶೀಘ್ರವೇ ಮೊದಲಿನ ಕಾಂತಿ ಪಡೆಯುತ್ತದೆ.

*ಸಮಪ್ರಮಾಣದಲ್ಲಿ ಕೊಂಚ ಸಕ್ಕರೆ ಮತ್ತು ಜೇನನ್ನು ಬೆರೆಸಿ ನಯವಾಗಿ ಮುಖದ ಚರ್ಮದ ಮೇಲೆ ಹಚ್ಚತ್ತ ಬನ್ನಿ. ಇದರಿಂದ ಮುಖದ ಮೇಲಿನ ಸತ್ತ ಜೀವಕೋಶಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ತ್ವಚೆಯ ಅಂದವನ್ನು ಹೆಚ್ಚಿಸುವ ಜೇನು ಮತ್ತು ಹಾಲಿನ ಪ್ಯಾಕ್ ಒಂದು ಟೊಮೆಟೊವಿನ ಸಿಪ್ಪೆ ಮತ್ತು ಬೀಜ ನಿವಾರಿಸಿ ಕೇವಲ ತಿರುಳನ್ನು ಸಮಪ್ರಮಾಣದಲ್ಲಿ ಪೀಚ್ ಹಣ್ಣಿನ ತಿರುಳಿನೊಂದಿಗೆ ಬೆರೆಸಿ ದಪ್ಪನೆಯ ಲೇಪ ತಯಾರಿಸಿ. ಈ ಲೇಪವನ್ನು ಈಗತಾನೇ ತೊಳೆದುಕೊಂಡ ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ.

* ಒಂದು ಲಿಂಬೆಹಣ್ಣಿನ ರಸವನ್ನು ನೇರವಾಗಿ ಮುಖದ ಮೇಲೆ ಹಚ್ಚಿಕೊಳ್ಳಿ. ಕಣ್ಣುಗಳಿಗೆ ತಾಕಿದರೆ ಭಾರೀ ಉರಿಯಾಗುವ ಕಾರಣ ಕಣ್ಣುಗಳ ಕೆಳಗೆ ಅತಿ ಹೆಚ್ಚಿನ ಎಚ್ಚರಿಕೆ ವಹಿಸಿ. ಲಿಂಬೆರಸದ ಬಿಳಿಚಿಸುವ ಗುಣ ಚರ್ಮ ಕಳೆದುಕೊಂಡಿದ್ದ ಕಾಂತಿಯನ್ನು ಮತ್ತೆ ತರಲು ನೆರವಾಗುತ್ತದೆ. ಸುಮಾರು ಐದು ನಿಮಿಷದ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

* ಸಮಪ್ರಮಾಣದಲ್ಲಿ ಹಾಲಿನ ಕೆನೆ, ಕಡ್ಲೆಹಿಟ್ಟು ಮತ್ತು ಚಿಟಿಕೆಯಷ್ಟು ಅರಿಶಿನ ಸೇರಿಸಿ ದಪ್ಪನೆಯ ಲೇಪನ ತಯಾರಿಸಿ. ಈ ಲೇಪನವನ್ನು ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

Comments are closed.