ಅಂತರಾಷ್ಟ್ರೀಯ

ಅಫ್ಘಾನಿಸ್ಥಾನದಲ್ಲಿ ನೆಲೆ ವಿಸ್ತರಿಸಿಕೊಳ್ಳುತ್ತಿರುವ ಐಸಿಸ್; ತಾಲಿಬಾನ್ ಗೆ ತೊಂದರೆ

Pinterest LinkedIn Tumblr

ISIS-Talibanಕಾಬುಲ್: ಒಂದು ಭಯೋತ್ಪಾದಕ ಸಂಘಟನೆ ಮತ್ತೊಂದು ಭಯೋತ್ಪಾದಕ ಸಂಘಟನೆಗೆ ಸೆಡ್ಡು ಹೊಡೆದಿರುವುದು ಅಫ್ಘಾನಿಸ್ಥಾನದಲ್ಲಿ. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾದ (ಐಸಿಸ್) ಬೆಂಬಲಿಗರು ಅಫ್ಘಾನಿಸ್ಥಾನದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿರುವ ಹಿನ್ನಲೆಯಲ್ಲಿ ತಾಲಿಬಾನ್ ಭಯೋತ್ಪಾದಕ ಸಂಸ್ಥೆಗೆ ಹಿನ್ನಡೆಯಾಗಿದ್ದು, ಕಳವಳ ವ್ಯಕ್ತಪಡಿಸಿದೆ.

ಬದಖ್ಸಹನ್ ಪ್ರಾಂತ್ಯದ ಕೆಲವೆಡೆ ಐಸಿಸ್ ಬಾವುಟಗಳು ತಲೆಯೆತ್ತಿರುವ ಹಿನ್ನಲೆಯಲ್ಲಿ ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ಹೇಳಿಕೆ ನೀಡಿದ್ದಾನೆ.
ವಾರ್ಡೋಜ್ ಜಿಲ್ಲೆಯ ಖೋಸ್ತಾಕ್ ಪ್ರದೇಶದಲ್ಲಿ ನೂರಾರು ತಾಲಿಬಾನ್ ಭಯೋತ್ಪಾದಕರು ಐಸಿಸ್ ಬಾವುಟ ಹಿಡಿದಿರುವುದು ಹಿಡಿದಿದ್ದರು ಎಂದು ಶನಿವಾರ ಅಧಿಕಾರಿಗಳು ಹೇಳಿರುವುದಾಗಿ ಖಮಾಸ್ ಪ್ರೆಸ್ ವರದಿ ಮಾಡಿದೆ.
ವಾರ್ಡೋಜ್ ಜಿಲ್ಲೆಯ ಖೋಸ್ತಾಕ್ ಪ್ರದೇಶ ಮತ್ತು ಬದಖ್ಸಹನ್ ಪ್ರಾಂತ್ಯ ತಾಲಿಬಾನ್ ಸಂಘಟನೆಯ ಹಿಡಿತದಲ್ಲಿದ್ದು ತಮ್ಮ ದೇಶದಲ್ಲಿ ಬೇರೆ ಯಾವುದೇ ಭಯೋತ್ಪಾದಕ ಸಂಘಟನೆ ನಿಯಂತ್ರಣ ಮಾಡಲು ಬಿಡುವುದಿಲ್ಲ ಎಂದು ಮುಜಾಹಿದ್ ಹೇಳಿರುವುದಾಗಿ ವರದಿಯಾಗಿದೆ.
ಅಫ್ಘಾನಿಸ್ಥಾನದಲ್ಲಿ ಕಳೆದ ವರ್ಷ ತಾಲಿಬಾನ್ ಮತ್ತು ಐಸಿಸ್ ಬೆಂಬಲಿಗರ ಪರಸ್ಪರ ಜಿಹಾದ್ ಯುದ್ಧ ಘೋಷಿಸಿಕೊಂಡಿದ್ದರು.
ಇದಕ್ಕೂ ಮುಂಚಿತವಾಗಿ ಐಸಿಸ್ ಮುಖಂಡ ಅಬು ಬಕರ್ ಅಲ್-ಬಾಗ್ಧಾದಿ ತಾಲಿಬಾನ್ ಮುಖಂಡ ಮುಲ್ಲಾ ಮೊಹಮದ್ ಒಮರ್ ನನ್ನು “ಮೂರ್ಖ ಮತ್ತು ಅನಕ್ಷರಸ್ಥ ಯೋಧ” ಎಂದು ಕರೆದಿದ್ದರೆ ಅಫ್ಘಾನಿಸ್ಥಾನದಲ್ಲಿ ಐಸಿಸ್ ಬಾವುಟಗಳನ್ನು ಏರದಂತೆ ತಾಲಿಬಾನ್ ನಿಷೇಧ ಹೇರಿತ್ತು.

Comments are closed.