ಮುಂಬೈ

ಭಾರತಕ್ಕೆ ವಾಪಸ್ಸಾಗದೆ ಸೌದಿಯಲ್ಲೇ ಉಳಿದ ವಿವಾದಿತ ಪ್ರವಚನಕಾರ ಜಾಕಿರ್ ನಾಯಕ್

Pinterest LinkedIn Tumblr

Zakirಮುಂಬೈ: ವಿವಾದಾತ್ಮಕ ಇಸ್ಲಾಮಿಕ್ ಪ್ರವಚನಕಾರ ಜಾಕೀರ್ ನಾಯಕ್ ತನ್ನ ಭಾರತ ಪ್ರವಾಸವನ್ನು ರದ್ದು ಪಡಿಸಿಕೊಂಡಿದ್ದಾರೆ.

ಪ್ರವಚನ ಸಂಬಂಧ ಸೌದಿ ಅರೇಬಿಯಾಗೆ ತೆರಳಿದ್ದ ಜಾಕಿರ್ ನಾಯಕ್ ಸೋಮವಾರ ಬೆಳಗ್ಗೆ ಮುಂಬೈಗೆ ವಾಪಸಾಗಬೇಕಿತ್ತು. ಆದರೆ ಭಾರತದಲ್ಲಿ ಸದ್ಯ ಪರಿಸ್ಥಿತಿಗಳು ತನ್ನಗೆ ವಿರುದ್ಧವಾಗಿರುವುದರಿಂದ ಸೌದಿಯಲ್ಲೇ ಉಳಿಯಲು ತೀರ್ಮಾನಿಸಿದ್ದಾರೆ ಎನ್ನಲಾಗಿದ್ದು, ವಿಡಿಯೋ ಕಾನ್ಪರೆಸ್ಸಿಂಗ್ ಮೂಲಕ ನಾಯಕ್ ಈ ಬಗ್ಗೆ ಸ್ಪಷ್ಟನೆ ನೀಡಬಹುದು ಎಂದು ಪೊಲೀಸರು ಮೂಲಗಳು ತಿಳಿಸಿವೆ.

ಬಾಂಗ್ಲಾದೇಶದ ಢಾಕಾದಲ್ಲಿ ಉಗ್ರ ದಾಳಿ ನಡೆಸಿದ್ದ ಉಗ್ರರ ಪೈಕಿ ಇಬ್ಬರು ಜಾಕಿರ್ ನಾಯಕ್ ಪ್ರವಚನಗಳಿಂದ ಸ್ಪೂರ್ತಿ ಪಡೆದಿದ್ದೆಂಬ ಬಹಿರಂಗ ಪಡಿಸಿದ ಹಿನ್ನೆಲೆಯಲ್ಲಿ ಜಾಕಿರ್ ನಾಯಕ್ ಬಗ್ಗೆ ಭಾರತ ಸರ್ಕಾರ ಹೆಚ್ಚಿನ ನಿಗಾ ಇರಿಸಿತ್ತು.

Comments are closed.