ಅಂತರಾಷ್ಟ್ರೀಯ

ಜೈಲು ಸಿಬ್ಬಂದಿಯನ್ನ ರಕ್ಷಿಸಲು ಜೈಲು ಕಂಬಿ ಮುರಿದ ಕೈದಿಗಳು! ಈ ವೀಡಿಯೊ ನೋಡಿ

Pinterest LinkedIn Tumblr

https://youtu.be/aYkl5C-QgnA

ಹೂಸ್ಟನ್: ಜೈಲು ಕಂಬಿ ಮುರಿದು ಕೈದಿಗಳು ಪರಾರಿಯಾದ ಸುದ್ದಿಗಳನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ, ಅಮೆರಿಕದ ಟೆಕ್ಸಾಸ್‌ನಲ್ಲಿ ಜೈಲಿನ ಭದ್ರತಾ ಸಿಬ್ಬಂದಿಯನ್ನು ರಕ್ಷಿಸುವುದಕ್ಕಾಗಿ ಕೈದಿಗಳು ಕಂಬಿ ಮುರಿದಿದ್ದಾರೆ.

ಹೌದು. ಜೈಲಿನ ಕೊಠಡಿಗಳನ್ನು ಕಾಯುತ್ತಿದ್ದ ಭದ್ರತಾ ಸಿಬ್ಬಂದಿಯು ಕೈದಿಗಳೊಂದಿಗೆ ಜೋಕ್ ಮಾಡುತ್ತಾ ಕುಳಿತಿದ್ದರು. ಈ ವೇಳೆ, ಅವರಿಗೆ ಒಮ್ಮೆಲೇ ಹೃದಯಾಘಾತವಾಗಿ, ಕುಳಿತಲ್ಲಿಂದಲೇ ಕುಸಿದು ಬಿದ್ದರು. ಒಳಗಿದ್ದ ಕೈದಿಗಳು ಸಹಾಯಕ್ಕಾಗಿ ಎಷ್ಟೇ ಕೂಗಿಕೊಂಡರೂ ಯಾರೂ ಹತ್ತಿರ ಸುಳಿಯಲಿಲ್ಲ. ಕೊನೆಗೆ ಕೈಕೋಳ ತೊಟ್ಟಿದ್ದ ೮ ಮಂದಿ ಕೈದಿಗಳು ಹರಸಾಹಸ ಪಟ್ಟು, ಕಂಬಿ ಮುರಿದು ಹೊರಬಂದು, ಭದ್ರತಾ ಸಿಬ್ಬಂದಿಯನ್ನು ಎತ್ತಿಕೊಂಡು, ದ್ವಾರದ ಬಳಿ ಬಂದು ಕೂಗಾಡಿದ್ದಾರೆ. ಕೂಡಲೇ ಪೊಲೀಸರು ಬಂದು ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Comments are closed.