
ಹೆಚ್ಚು ಉಪ್ಪು ಸೇವಿಸಿದರೆ ಹೃದಯಕ್ಕೆ ಅಪಾಯ, ಅದರಿಂದ ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯವಿರುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆಗಂತ ಉಪ್ಪು ತಿನ್ನುವುದನ್ನೇ ಕಡಿಮೆ ಮಾಡಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಕಡಿಮೆ ಉಪ್ಪು ಸೇವನೆ ಕೂಡ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಇತ್ತೀಚಿನ ವಿಜಾnನಿಕ ಅಧ್ಯಯನವೊಂದು ತಿಳಿಸಿದೆ.
49 ದೇಶಗಳ 1.30 ಲಕ್ಷ ಜನರನ್ನು ಅಧ್ಯಯನ ನಡೆಸಿ, ಸಾಮಾನ್ಯ ರಕ್ತದೊತ್ತಡ ಉಳ್ಳವರಿಗೆ ಹೋಲಿಸಿದರೆ, ಅಧಿಕ ರಕ್ತದೊತ್ತಡ, ಹೃದಯದ ಕಾಯಿಲೆ ಉಳ್ಳವರಿಗೆ ಉಪ್ಪಿನ ಸೇನೆಯಿಂದ ಎಷ್ಟರ ಮಟ್ಟಿನ ಅಪಾಯವಿದೆ ಎನ್ನುವುದನ್ನು ವಿಶ್ಲೇಷಣೆ ಮಾಡಲಾಗಿತ್ತು.
ಈ ವೇಳೆ, ಅಧಿಕ ರಕ್ತದೊತ್ತಡ ಉಳ್ಳವರು ಕಡಿಮೆ ಪ್ರಮಾಣದ ಉಪ್ಪು$ ಸೇವಿಸುವುದರಿಂದ ಅವರಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಸಂಭವಿಸುವ ಅಪಾಯ ಹೆಚ್ಚಿರುತ್ತದೆ ಎನ್ನುವುದು ಅಧ್ಯಯನದ ವೇಳೆ ಕಂಡುಬಂದಿದೆ. ಮೆಕ್ ಮಾಸ್ಟರ್ ಯುನಿವರ್ಸಿಟಿ ಮತ್ತು ಹ್ಯಾಮಿಲ್ಟನ್ ಹೆಲ್ತ್ ಸೈನ್ಸ್ ನಡೆಸಿದ ಅಧ್ಯಯನ ಇದಾಗಿದೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವ್ಯಕ್ತಿಯೊಬ್ಬ ಪ್ರತಿನಿತ್ಯ 5 ರಿಂದ 6 ಗ್ರಾಂ ಉಪ್ಪನ್ನು ಸೇವಿಸಬೇಕು.
ಫಲಿತಗಳು…
ಕಡಿಮೆ ಉಪ್ಪು ಸೇವನೆ ಕೂಡ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ
ಮೆಕ್‌ಮಾಸ್ಟರ್ ಯುನಿವರ್ಸಿಟಿ ಮತ್ತು ಹ್ಯಾಮಿಲ್ಟನ್ ಹೆಲ್ತ್ ಸೈನ್ಸ್‌ನಡೆಸಿದ ಅಧ್ಯಯನ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವ್ಯಕ್ತಿಯೊಬ್ಬ ಪ್ರತಿನಿತ್ಯ ಸರಾಸರಿ 5ರಿಂದ 6 ಗ್ರಾಂನಷ್ಟು ಉಪ್ಪನ್ನು ಸೇವಿಸಬೇಕು.
-ಉದಯವಾಣಿ
Comments are closed.