ರಾಷ್ಟ್ರೀಯ

ಯಾವ ನಟನಿಗಿಂತ ನಾನು ಕಮ್ಮಿ ಇಲ್ಲ- ಲಾಲು

Pinterest LinkedIn Tumblr

Lalu-Prasad-Yadav-Arrested-e1458116224849ಪಾಟನಾ: ನಾನು ಯಾವ ಸ್ಟಾರ್ ನಟನಗಿಂತಲೂ ಕಡಿಮೆ ಇಲ್ಲ ಎಂದು ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ಬಾಲಿವುಡ್ ನಟ ಇರ್ಫಾನ್ ಖಾನ್ ಅಭಿನಯದ ‘ಮದಾರಿ’ ಚಿತ್ರದ ಪ್ರಚಾರದಲ್ಲಿ ಭಾಗವಹಿಸಿದ ಲಾಲು‘ನನ್ನ ಜೀವನವನ್ನು ಆಧರಿಸಿ ಸಿನಿಮಾ ಮಾಡಿದರೆ ಅದು ಉತ್ತಮ ಚಿತ್ರವಾಗಲಿದೆ, ಅದರಲ್ಲಿ ಇರ್ಫಾನ್‌ಖಾನ್ ಅವರೇ ಮುಖ್ಯ ಪಾತ್ರ ವಹಿಸಬೇಕೆಂಬುದು ನನ್ನ ಇಚ್ಚೆ. ಆದರೆ ನಾಯಕಿಯ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದನ್ನು ಇರ್ಫಾನ್ ಖಾನ್ ಅವರಿಗೇ ಬಿಡುತ್ತೇನೆ’ ಎಂದು ಹೇಳಿದ್ದಾರೆ.

ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದ ಲಾಲು ಕಾಲೇಜು ದಿನಗಳಲ್ಲಿ ದಿಲೀಪ್ ಕುಮಾರ್ ನನ್ನ ನೆಚ್ಚಿನ ನಟನಗಿದ್ದ ಜಾನಿ ವಾಕರ್‌ರ ನಟನೆಯನ್ನು ಖುಷಿಯಿಂದ ನೋಡುತ್ತಿದ್ದೆ ಇದಲ್ಲದೇ, ವೈಜಯಂತಿ ಮಾಲ ಮತ್ತು ಹೇಮಾಮಾಲಿನಿಯರನ್ನು ಬಹಳ ಇಷ್ಟ ಪಟ್ಟಿದ್ದೆ ಎಂದಿದ್ದಾರೆ. ಲಾಲು ಈ ಹಿಂದೆ ಸುನಿಲ್ ಶಟ್ಟಿ ಅಭಿನಯದ ‘ಪದ್ಮಶ್ರೀ ಲಾಲು ಪ್ರಸಾದ್ ಯಾದವ್’ ಹೆಸರಿನ ಚಿತ್ರದಲ್ಲಿ ಲಾಲು ಅಭಿನಯಿಸಿದ್ದರು.

Comments are closed.