ಅಂತರಾಷ್ಟ್ರೀಯ

ಶೀಘ್ರದಲ್ಲೇ ಅಮೇರಿಕದ ಮೇಲೆ ದಾಳಿ- ಹಂಝಾ ಬಿನ್ ಲಾಡನ್

Pinterest LinkedIn Tumblr

pg-19-bin-laden-3ದುಬೈ: ತಂದೆಯ ಹತ್ಯೆಯ ಪ್ರತಿಕಾರವನ್ನು ಅಮೆರಿಕದ ವಿರುದ್ಧ ನಾವು ತೀರಿಸಿಕೊಳ್ಳುತ್ತೇವೆ ಎಂದು ಅಲ್-ಖೈದಾ ಸಂಘಟನೆಯ ಮುಖಂಡ ಮೃತ ಒಸಾಮ ಬಿನ್ ಲಾಡನ್ ಪುತ್ರ ಹಂಝಾ ಬಿನ್ ಲಾಡನ್ ಬೆದರಿಕೆಯ ಸಂದೇಶವನ್ನು ಕಳಿಸಿದ್ದಾನೆ.

ಸಾಮಾಜಿಕ ಜಾಲತಾಣಕ್ಕೆ ಸುಮಾರು 20 ನಿಮಿಷಗಳ ಕಾಲ ಭಾಷಣ ನೀಡಿದ ಆತ ಜಗತ್ತಿನಾದ್ಯಂತ ಭಯೋತ್ಪಾದನೆಯನ್ನು ಮುಂದುವರೆಸಿ, ಅಮೆರಿಕದ ಮತ್ತು ಅದರ ಒಕ್ಕೂಟ ರಾಷ್ಟ್ರಗಳ ವಿರುದ್ಧ ಯುದ್ಧ ಮಾಡಲಾಗುತ್ತದೆ ಎಂದು ನೇರವಾಗಿಯೇ ಅಮೇರಿಕ ಹಾಗೂ ಒಕ್ಕೂಟ ರಾಷ್ಟ್ರಗಳ ವಿರುದ್ದ ಯುದ್ದ ಸಾರಿದ್ದಾನೆ.

ನಾವು ನಿಮ್ಮನ್ನು ನಿರಂತರವಾಗಿ ದಾಳಿ ನಡೆಸುತ್ತಲೇ ಇರುತ್ತೇವೆ. ಪ್ಯಾಲೆಸ್ತೀನ್, ಅಫ್ಗಾನಿಸ್ತಾನ, ಸಿರಿಯಾ, ಇರಾಕ್, ಯೆಮನ್, ಸೊಮಲಿಯಾ ಹಾಗೂ ಇತರ ಮುಸ್ಲಿಂ ರಾಷ್ಟ್ರಗಳ ಮೇಲೆ ಇರುವ ನಿಮ್ಮ ಅಧಿಪತ್ಯವನ್ನು ಕೊನೆಗೊಳಿಸುತ್ತೇವೆ ಎಂದು ಹಂಝಾ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾನೆ.

ಇದು ನನ್ನ ತಂದೆಯನ್ನು ಕೊಂದಿರುವ ಪ್ರತಿಕಾರಕ್ಕಾಗಿ ಅಲ್ಲ ಇದು ಇಡೀ ಜಗತ್ತಿನ ಮುಸಲ್ಮಾನರ ರಕ್ಷಣೆಗಾಗಿ ನಡೆಯುವ ಪ್ರತಿಕಾರ ಎಂದು ಹಂಝಾ ಬಿನ್ ಲಾಡನ್ ಹೇಳಿದ್ದಾನೆ.

ಅಮೆರಿಕ ಸೇನೆಯು 2011ರಲ್ಲಿ ಒಸಾಮ ಬಿನ್ ಲಾಡನ್ ಅನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಿತ್ತು.

Comments are closed.