ಬೆಂಗಳೂರು : ಹಿಂದಿನ ಬಿಜೆಪಿ ಸರಕಾರದ ದುರಾಡಳಿತದಿಂದಲೇ ಇಂದು ಅಧಿಕಾರಿಗಳ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಕಾಂಗ್ರೆಸ್ ಮೇಲಿನ ಆರೋಪವನ್ನು ನುಣುಚಾಗಿ ತಳ್ಳಿಹಾಕುವ ಪ್ರಯತ್ನ ನಡೆಸಿದ್ದಾರೆ.
ಕೆಪಿಸಿಸಿ ಭಾನುವಾರ ಆಯೋಜಿಸಿದ್ದ ದಿನೇಶ್ ಗುಂಡೂರಾವ್ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಗೆ ಆಡಳಿತ ನಡೆಸಿ ಸಾಕಷ್ಟು ಅನುಭವವಿದೆ. ಆದರೆ ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ, ಅಧಿಕಾರಿಗಳಿಗೆ ನೀಡಿದ ಒತ್ತಡ ಹಾಗೂ ಕಿರುಕುಳದ ಪರಿಣಾಮ ಈಗ ಅಧಿಕಾರಿಗಳು ಆತ್ಯಹತ್ಯೆಯ ದಾರಿ ಹಿಡಿಯುತ್ತಿದ್ದಾರೆ ಎಂದರು.
ಬಿಜೆಪಿ ತನ್ನ ಅಧಿಕಾರವಧಿಯನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಧಿಕಾರದ ವೇಳೆ ಏನೆಲ್ಲಾ ಮಾಡಿದ್ದೀರಿ. ರಾಜ್ಯದಲ್ಲಿ ಭ್ರಷ್ಟಚಾರದ ಪ್ರಮಾಣ ಎಷ್ಟಿತ್ತು ಎಂಬುದನ್ನು ಮನನ ಮಾಡಿಕೊಳ್ಳಿ. ನಿಮ್ಮ ಕಾಲದಲ್ಲೂ ಅವರ ಮೇಲೆ ಒತ್ತಡ ಹಾಕಿದ್ದೀರಿ. ಇಂದು ಅಧಿಕಾರಿಗಳು ಆತ್ಮಹತ್ಯೆ ದಾರಿ ಹಿಡಿಯುತ್ತಿರುವುದಕ್ಕೆ ನೀವೂ ಜವಾಬ್ಧಾರರೇ ಎಂದರು.
ದೇಶ ಇಂದು 7.6 ರಷ್ಟು ಜಿಡಿಪಿ ಬೆಳವಣಿಗೆ ಕಾಣಲು ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರದ ನೀತಿ ಹಾಗೂ ನಿಯಮಗಳು ಕಾರಣ. ಪ್ರಸ್ತುತ ಆಡಳಿತ ಮಾಡುತ್ತಿರುವ ಬಿಜೆಪಿಯಿಂದ ದೇಶ ಅಭಿವೃದ್ಧಿಯತ್ತ ಸಾಗುತ್ತಿಲ್ಲ ಎಂದು ದೂರಿದರು.
Comments are closed.