ರಾಷ್ಟ್ರೀಯ

ಕೇರಳದಲ್ಲಿ ಬರ್ಗರ್‌ಗೆ ಬೊಜ್ಜು ತೆರಿಗೆ

Pinterest LinkedIn Tumblr

keralaತಿರುವನಂತಪುರ (ಪಿಟಿಐ): ಕೇರಳದಲ್ಲಿ ಬರ್ಗರ್‌, ಪಿಜ್ಜಾ ಮುಂತಾದ ‘ಜಂಕ್‌’ ಆಹಾರ ಸೇವನೆ ದುಬಾರಿಯಾಗಲಿದೆ. ಇಂತಹ ಆಹಾರಗಳ ಮೇಲೆ ಶೇ 14.5ರಷ್ಟು ತೆರಿಗೆ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇತ್ತೀಚೆಗೆ ಅಧಿಕಾರಕ್ಕೇರಿದ ಸಿಪಿಎಂ ನೇತೃತ್ವದ ಎಡರಂಗ ಸರ್ಕಾರ ಮೊದಲನೇ ಬಜೆಟ್‌ ಮಂಡಿಸಿದ್ದು ಅದರಲ್ಲಿ ಈ ಪ್ರಸ್ತಾವ ಮುಂದಿರಿಸಲಾಗಿದೆ.

ಬರ್ಗರ್‌, ಪಿಜ್ಜಾ, ಪಾಸ್ತಾಗಳಂತಹ ಆಹಾರ ಸರಬರಾಜು ಮಾಡುವ ಬ್ರಾಂಡೆಡ್‌ ಹೋಟೆಲುಗಳಿಗೆ ಈ ತೆರಿಗೆ ಅನ್ವಯ ಆಗಲಿದೆ. ಕೇರಳ ಸರ್ಕಾರ ತೀವ್ರ ಆರ್ಥಿಕ ಮುಗ್ಗಟ್ಟಿಲ್ಲಿದೆ. ವರಮಾನ ಸಂಗ್ರಹಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಬೊಜ್ಜು ತೆರಿಗೆಯ ಉದ್ದೇಶ ವರಮಾನ ಸಂಗ್ರಹ ಅಲ್ಲ, ಜನರ ಆರೋಗ್ಯ ರಕ್ಷಿಸುವುದು ಎಂದು ಹಣಕಾಸು ಸಚಿವ ಟಿ.ಎಂ. ಥಾಮಸ್‌ ಐಸಾಕ್‌ ಹೇಳಿದ್ದಾರೆ.

ಬೊಜ್ಜು ತೆರಿಗೆಯಿಂದ ಸರ್ಕಾರಕ್ಕೆ ವರ್ಷಕ್ಕೆ ₹ 10 ಕೋಟಿ ವರಮಾನ ದೊರೆಯಬಹುದು ಎಂದು ಅಂದಾಜಿಸಲಾಗಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಬೆಳವಣಿಗೆ ಕುಂಠಿತವಾಗಬಾರದು ಎಂಬ ಕಾರಣಕ್ಕೆ ₹ 12 ಸಾವಿರ ಕೋಟಿಯ ‘ಹಿಂಜರಿಕೆ ತಡೆ’ ಪ್ಯಾಕೇಜ್‌ ಕೂಡ ಪ್ರಕಟಿಸಲಾಗಿದೆ.

ಕೇರಳ ಸರ್ಕಾರವು ಬಜೆಟ್‌ನಲ್ಲಿ ಪರಿಸರ ಕಾಳಜಿಯನ್ನೂ ವ್ಯಕ್ತಪಡಿಸಿದ್ದು, ಹತ್ತು ವರ್ಷ ಹಳೆಯದಾದ ವಾಹನಗಳ ಮೇಲೆ ‘ಹಸಿರು ತೆರಿಗೆ’ ವಿಧಿಸುವ ಪ್ರಸ್ತಾವ ಮುಂದಿಟ್ಟಿದೆ.

ಹತ್ತು ವರ್ಷ ಹಳೆಯದಾದ ಸಾರ್ವಜನಿಕ ಸಾರಿಗೆ ವಾಹನಗಳಿಗೆ ಮತ್ತು 15 ವರ್ಷ ಹಳೆಯದಾದ ಖಾಸಗಿ ವಾಹನಗಳಿಗೆ ಹಸಿರು ತೆರಿಗೆ ವಿಧಿಸಲಾಗುವುದು. ನೋಂದಣಿ ನವೀಕರಣ ಸಂದರ್ಭದಲ್ಲಿ ಈ ತೆರಿಗೆ ಸಂಗ್ರಹಿಸುವ ಉದ್ದೇಶ ಇರಿಸಿಕೊಳ್ಳಲಾಗಿದೆ.

Comments are closed.