
ಮುಂಬೈ: ಮಹಾರಾಷ್ಟ್ರದ ಸರ್ಕಾರಿ ಅಧಿಕಾರಿಯೊಬ್ಬರು ಕಾರಿನಲ್ಲೇ ಏಕೈಕ ಪುತ್ರನಿಗೆ ಕಾರ್ಬನ್ ಮೋನಾಕ್ಸೈಡ್ ಬಲವಂತವಾಗಿ ನೀಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗುರುವಾರ ರಾತ್ರಿ ಮುಂಬೈಯಲ್ಲಿ ಈ ಘಟನೆ ನಡೆದಿದ್ದು, ನಾಗರಿಕ ಸರಬಾರಜು ಇಲಾಖೆಯ ಇನ್ಸ್ ಪೆಕ್ಟರ್ ಮಹೇಶ್ ಪವಾರ್(41) ಮಗನನ್ನು ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಗುರುವಾರ ರಾತ್ರಿ ಮಹೇಶ್ ಕುಮಾರ್ 14 ವರ್ಷದ ಕೌಶಲ್ನನ್ನು ಕರೆದುಕೊಂಡು ಹೊರಗಡೆ ಹೋಗುತ್ತೇನೆ ಎಂದು ಪತ್ನಿ ಮಂಶಿಗೆ ತಿಳಿಸಿದ್ದಾರೆ. ಪತಿ ಎಷ್ಟು ಹೊತ್ತಾದರೂ ಮನೆ ಬಾರದೇ ಇರುವುದನ್ನು ನೋಡಿದ ಪತ್ನಿ ಕರೆ ಪತಿಯ ನಂಬರ್ಗೆ ಕರೆ ಮಾಡಿದ್ದಾರೆ. ಕರೆ ಮಾಡಿದಾಗ ಫೋನ್ ಕರೆಯನ್ನು ಯಾರು ಸ್ವೀಕರಿಸುತ್ತಿರಲಿಲ್ಲ. ಇದರಿಂದ ಗಾಬರಿಯಾಗಿ ಪತ್ನಿ ಬೆಳಗ್ಗೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ. ಸಮೀಪದ ನಿವಾಸಿಗಳು ಹುಡುಕಲು ಆರಂಭಿಸಿದ ಅವರ ನಿವಾಸದ ಸಮೀಪವೇ ನಿಂತಿದ್ದ ಅಲ್ಟೋ ಕಾರಿನಲ್ಲಿ ಇಬ್ಬರ ಶವ ಪತ್ತೆಯಾಗಿದೆ.
ಆತ್ಮಹತ್ಯೆ: ಕಾರಿನ ಡೋರ್ ಓಪನ್ ಮಾಡಿದಾಗ ಕಾರ್ಬನ್ ಮೊನಾಕ್ಸೈಡ್ ಸಿಲಿಂಡರ್ ಪತ್ತೆಯಾಗಿದೆ. ಆರಂಭದಲ್ಲಿ ಮಗನ ಮೂಗಿಗೆ ಪೈಪ್ ಮೂಲಕ ಗ್ಯಾಸ್ವನ್ನು ಬಲವಂತವಾಗಿ ಸೇವಿಸಿದ್ದು ಬಳಿಕ ತಾನು ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೊಂದಿದ್ದು ಯಾಕೆ: ಮಗನಿಗೆ ಮರೆಗುಳಿತ ಕಾಯಿಲೆ ಇದ್ದು ಮಹೇಶ್ ಕುಮಾರ್ ನಗರದ ವಿವಿಧ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಮಗನ ನೆನಪಿನ ಶಕ್ತಿಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ. ಇದರಿಂದ ಮಾನಸಿಕವಾಗಿ ನೊಂದು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ ಪ್ರಾಥಮಿಕ ವರದಿಯ ಆಧಾರದಲ್ಲಿ ಪೊಲೀಸರು ಹೇಳಿಕೆ ನೀಡಿದ್ದಾರೆ.
Comments are closed.