ರಾಷ್ಟ್ರೀಯ

ಶಿಸ್ತುಬದ್ಧ ವ್ಯಾಯಾಮದಿಂದ ಮಹಿಳೆಯರಲ್ಲಿ ಮಾನಸಿಕ ಹಾಗೂ ದೈಹಿಕ ಶಕ್ತಿ ವೃದ್ದಿ

Pinterest LinkedIn Tumblr

exercise-stretch

ಚಿಕಾಗೋ: ಸ್ತನ ಕ್ಯಾನ್ಸರ್ನಿಂದ ಗುಣಮುಖರಾದ ಮಹಿಳೆಯರಲ್ಲಿ ಸಾಮಾನ್ಯವಾಗಿ ತಲೆದೋರುವ ಒತ್ತಡದ ಕಾರಣದಿಂದಾಗಿ ಅವರ ಸ್ಮರಣಶಕ್ತಿ ಹಾನಿಯಾಗುವಂತೆ ಆಗುವುದು ಸಾಮಾನ್ಯ. ಆದರೆ, ವ್ಯಾಯಾಮದಿಂದ ಈ ಮಹಿಳೆಯರು ತಮ್ಮ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಶಿಸ್ತುಬದ್ಧ ವ್ಯಾಯಾಮವು ಮಹಿಳೆಯರಿಗೆ ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನುನೀಡುತ್ತದೆ. ಅವರು ಆ ಖಿನ್ನತೆಯಿಂದ ಹೊರಬರಲು ಬಹುತೇಕ ನೆರವಾಗುತ್ತದೆ ಎಂದು ಈ ಕುರಿತಾದ ಸಮೀಕ್ಷೆಯ ಸಾರಥ್ಯ ವಹಿಸಿದ್ದ ಸಿಯೋಚಾನ್ ಫಿಲಿಪ್ಸ್ ತಿಳಿಸಿದ್ದಾರೆ.

ಚಿಕಾಗೊದ ಈಶಾನ್ಯ ವಿಶ್ವವಿದ್ಯಾನಿಲಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಫಿಲಿಪ್ಸ್ ರೋಗ ತಡೆಗೆ ಮುಂಜಾಗ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದೈಹಿಕ ಎಕ್ಸರ್ಸೈಜ್ ಜತೆಗೆ ಮಾನಸಿಕ ಸ್ವಾಸ್ಥ್ಯ, ಸ್ಮರಣಶಕ್ತಿಯನ್ನು ಸಮತೋಲನಕ್ಕೆ ತರುತ್ತದೆ. ಅನೇಕ ಮಹಿಳೆಯರು ಸ್ತನ ಕ್ಯಾನ್ಸರ್ನಿಂದ ಮುಕ್ತಿ ಸಿಕ್ಕಿದರೂ ಅವರು ಮಾನಸಿಕ ಖಿನ್ನತೆಗೊಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಸ್ತನ ಕ್ಯಾನ್ಸರ್ ಚಿಕಿತ್ಸೆಗೊಳಗಾದವರಲ್ಲಿ ಸ್ವಾಭಾವಿಕವಾಗಿಯೇ ಆತ್ಮ ವಿಶ್ವಾಸ ಕುಂದುತ್ತದೆ.

ಇದರಿಂದಾಗಿ ಮಹಿಳೆಯರು ಸಾಕಷ್ಟು ತೊಂದರೆಗೆ ಸಿಲುಕುತ್ತಾರೆ. ಒಂದು ಸಾರಿ ಈ ತರಹ ಸ್ಟ್ರೆಸ್ಗೆ ಒಳಗಾದರೆ ಅದರಿಂದ ಹೊರಬರುವುದು ದುಸ್ತರವಾಗುತ್ತದೆ. ಮುಖ್ಯವಾಗಿ ಮಾನಸಿಕವಾಗಿ ದುರ್ಬಲರಾಗುತ್ತಾರೆ. ಈ ಸಮೀಕ್ಷೆಯನ್ನು ಸ್ತನ ಕ್ಯಾನ್ಸರ್ ಪೀಡಿತರಾದ 1800 ಮಂದಿಯನ್ನು ಸಂಪರ್ಕಿಸಿ ಮಾಡಲಾಗಿದೆ. ಇದರಲ್ಲಿ 362 ಮಂದಿ ಸ್ತನ ಕ್ಯಾನ್ಸರ್ ರೋಗಿಗಳು ತಮ್ಮ ಉದ್ವಿಗ್ನತೆ, ಮರೆವುಗಳಿಗೆ ತುತ್ತಾಗಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಮಹಿಳೆಯರು ದೈಹಿಕ ಶ್ರಮದ ಕೆಲಸ ಮಾಡಿದರೆ, ಉದಾಹರಣೆಗೆ ತುಂಬಾ ವಾಕ್ ಮಾಡುವುದು, ಬೈಕ್ ಸವಾರಿ ಹಾಗೂ ಎಕ್ಸರ್ಸೈಜ್ಗಳಲ್ಲಿ ತೊಡಗಿಕೊಂಡವರು ಆತ್ಮವಿಶ್ವಾಸ, ಸ್ಮರಣ ಶಕ್ತಿಯನ್ನು ಕಳೆದುಕೊಳ್ಳುವುದಿಲ್ಲ. ಒಟ್ಟಾರೆ ಸಶ್ರಮ ವ್ಯಾಯಾಮ ಇಂತಹ ಮಹಿಳೆಯಯರಿಗೆ ಮಾನಸಿಕ, ದೈಹಿಕ ಸುಧಾರಣೆಗೆ ಕಾರಣವಾಗುತ್ತದೆ.

ಚಿಕಾಗೋದಲ್ಲಿ ಇಂದು ಬಿಡುಗಡೆ ಮಾಡಿಡಿದ ಸಮೀಕ್ಷಾ ವರದಿಯಲ್ಲಿ ಈ ಉಲ್ಲೇಖವನ್ನು ಹೇಳಲಾಗಿದೆ.

Comments are closed.