
ತುಮಕೂರು: ದೇವರಹಳ್ಳಿ ಗ್ರಾಮದಲ್ಲಿ ನಡೆದಿದ್ದ ನಿಗೂಢ ಜೋಡಿ ಕೊಲೆಯನ್ನು ಭೇದಿಸಿರುವ ಶಿರಾ ಗ್ರಾಮಾಂತರ ಪೊಲೀಸ್ ತಂಡ ಬಿಹಾರ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ವಿಜಯ್‍ಬುಂಯ್ಯಾ(45), ಉಮೇಶ್‍ಯಾದ್(32), ಕಪೀಲ್ ಭಾರತಿ(21) ಬಂಧಿತ ಆರೋಪಿಗಳು.
ತುಮಕೂರು ಜಿಲ್ಲೆ ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿಯ ದೇವರಹಳ್ಳಿ ಗ್ರಾಮದ ವೆಂಕಟಗಿರಿಯಪ್ಪ ಎಂಬುವರ ಜಮೀನಿನ ವೊದೆಯ್ಲಲಿ ಜೂ.29ರಂದು ಕೊಳೆತ ಸ್ಥಿತಿಯಲ್ಲಿ ಎರಡು ಮೃತ ದೇಹಗಳು ಪತ್ತೆಯಾಗಿದ್ದವು.ಈ ಮೃತ ದೇಹಗಳು ತಾಯಿ-ಮಗನ ಹೋಲಿಕೆಯಾಗುತ್ತಿತ್ತು. ಇದು ಸಂಶಯಾಸ್ಪದ ಸಾವೆಂದು ಪರಿಗಣಿಸಿ ಕಳ್ಳಂಬೆಳ್ಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದರು.
ವೈದ್ಯರು ಶವ ಪರೀಕ್ಷೆ ನಡೆಸಿ ಮೃತ ಹೆಂಗಸಿನ ವಯಸ್ಸು 40 ಮತ್ತು ಇನ್ನೊಂದು 15ರಿಂದ 18 ವರ್ಷದ ಬಾಲಕನ ಶವ ಮತ್ತು ಈ ಇಬ್ಬರನ್ನು ಕತ್ತುಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ವರದಿಯಲ್ಲಿ ಉಲ್ಲೇಖಿಸಿದ್ದರು. ಈ ಆಧಾರದ ಮೇಲೆ ಕಳ್ಳಂಬೆಳ್ಳ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳ ಪತ್ತೆಗಾಗಿ ಜಿಲ್ಲಾ ಎಸ್‍ಪಿ ಕಾರ್ತಿಕ್‍ರೆಡ್ಡಿ, ಅಡಿಷÀನಲ್ ಎಸ್‍ಪಿ ಮಂಜುನಾಥ್, ಶಿರಾ ಗ್ರಾಮಾಂತರ ವೃತ್ತ ನಿರೀಕ್ಷ ರಾಮಕೃಷ್ಣಯ್ಯ, ಇನ್ಸ್‍ಪೆಕ್ಟರ್ ಚಂದ್ರಶೇಖರ್, ಮಂಜುನಾಥ್, ತಾಂತ್ರಿಕ ವಿಭಾಗದ ನರಸಿಂಹರಾಜು ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಲಾಗಿತ್ತು.
ಈ ತಂಡ ಕೆಲವು ಸಾಕ್ಷಾಧಾರಗಳನ್ನು ಕಲೆ ಹಾಕಿ ಇಲ್ಲಿನ ಕೊಪ್ಪಳದ ಎಚ್‍ಆರ್‍ಬಿ ಸ್ಟೀಲ್ ಕಂಪೆನಿಯಲ್ಲಿ ಕೆಲವು ಮಾಹಿತಿ ಪಡೆದು ಅಲ್ಲಿನ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದಾಗ ಕೊಲೆಯಾಗಿರುವವರು ತಾಯಿ- ಮಗ ಎಂಬುದು ತಿಳಿದು ಬಂದಿದೆ.ಅಲ್ಲದೆ, ಆರೋಪಿಗಳು ಬಿಹಾರ ಮೂಲದವರೆಂಬ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ ಈ ಮೂರು ಮಂದಿಯನ್ನು ಬಂಧಿಸಲಾಗಿದೆ.
ಆರೋಪಿ ವಿಜಯ್ ಬುಂಯ್ಯಾ ಚಂದ್ರಿಕಾ ಎಂಬಾಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಈಕೆ ನಿನ್ನ ಪತ್ನಿ ಹಾಗೂ ಮಕ್ಕಳನ್ನು ಬಿಟ್ಟು ತನ್ನ ಹಾಗೂ 14 ವರ್ಷದ ಮಗ ಅರವಿಂದನೊಂದಿಗೆ ವಾಸ ಮಾಡುವಂತೆ ಪೀಡಿಸುತ್ತಿದ್ದಳು. ಈ ಕಾರಣಕ್ಕಾಗಿ ನಾನು ಸ್ನೇಹಿತರೊಂದಿಗೆ ಸೇರಿ ತಾಯಿ-ಮಗನನ್ನು ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.ಆರೋಪಿಗಳನ್ನು ಬಂಧಿಸಿದ ತಂಡಕ್ಕೆ ಎಸ್‍ಪಿ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.
Comments are closed.