ನವದೆಹಲಿ: ಚೀನಾ ದೇಶದಲ್ಲಿ ಸಾಮಾಜಿಕ ಜಾಲ ತಾಣವಾದ ಟ್ವಿಟ್ಟರ್‌ಗೆ ನಿಷೇಧ ಹೇರಿರುವ ಮಧ್ಯೆಯೂ ಅಂದಾಜು 1 ಕೋಟಿ ಬಳಕೆದಾರರನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಚೀನಾ ದೇಶದ 35.5 ಮಿಲಿಯನ್ ಬಳಕೆದಾರರು ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ಬಳಸುತ್ತಿದ್ದಾರೆ ಎಂದು ಹಿಂದಿನ ಅಂಕಿಅಂಶಗಳು ತಿಳಿಸುತ್ತಿದ್ದವು. ಆದರೆ, ನಿಜವಾದ ಅಂಕಿಅಂಶ ಕಡಿಮೆ ಎಂದು ಕಾಣುತ್ತದೆ.
ಚೀನಾದಲ್ಲಿ ಹಿಂದಿನ ಅಂದಾಜಿನ ಪ್ರಕಾರ 35.5 ಮಿಲಿಯನ್ ಟ್ವಿಟ್ಟರ್ ಬಳಕೆದಾರರಿದ್ದರು. ಆದರೆ, ವಾಸ್ತವತೆಯಲ್ಲಿ ಟ್ವಿಟ್ಟರ್ ಖಾತೆ ಹೊಂದಿದವರ ಕಡಿಮೆಯಿದ್ದಂತೆ ಕಂಡು ಬಂದಿತ್ತು. ಟೆಕ್ ಕ್ರಂಚ್ ಸಂಸ್ಥೆಯೊಂದಿಗೆ ಅಂತರಿಕ ಮೂಲಗಳು ಸಂದರ್ಶಿಸಿದಾಗ ಚೀನಾದಲ್ಲಿ ಟ್ವಿಟ್ಟರ್ ಬಳಕೆದಾರರ ಸಂಖ್ಯೆ 10 ಮಿಲಿಯನ್‌ಗೆ ತಲುಪಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ.
ಆದಾಗ್ಯೂ, ಈ ಅಂಕಿಸಂಖ್ಯೆಗಳು ಒಂದು ಮಧ್ಯಂತರ ಅಂದಾಜಾಗಿದ್ದು, ಸಂಸ್ಥೆ ಸಂಪೂರ್ಣವಾಗಿ ಖಚಿತಪಡಿಸಿಲ್ಲ. ಚೀನಾ ಬಳಕೆದಾರರು ವರ್ಚುವಲ್ ಪ್ರೈವೇಟ್ ನೆಟ್ವರ್ಕ್ ಬಳಸುತ್ತಿರುವುದರಿಂದ ನಿಖರವಾದ ಮಾಹಿತಿ ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
Comments are closed.