
ಬೆಂಗಳೂರು: ನಿಲ್ಲಿಸಿದ್ದ ವಾಹನದಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ಯುವಕನಿಗೆ ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸೂರು ರಸ್ತೆಯ ಬಿಗ್ ಬಜಾರ್ ಮುಂದೆ ರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ಹೊಂಡಾ ಕಂಪನಿಗೆ ಸೇರಿದ ಕ್ಯಾಂಟರ್ ನಿಂತಿತ್ತು. ಈ ವೇಳೆ ಕ್ಯಾಂಟರ್‍ನಲ್ಲಿದ್ದ ಡಕ್ ಹಾಗೂ ಇನ್ನಿತರ ವಸ್ತುಗಳನ್ನು ಕದಿಯಲು ಮೂವರು ದುಷ್ಕರ್ಮಿಗಳು ಮುಂದಾಗಿದ್ದಾರೆ. ಇದನ್ನ ಗಮನಿಸಿದ ಹೊಂಡಾ ಶೋರೂಂ ಕೆಲಸಗಾರರು ಕಳ್ಳರನ್ನು ಹಿಡಿಯಲು ಮುಂದಾಗಿದ್ದಾರೆ. ಆದರೆ, ಇಬ್ಬರು ಪರಾರಿಯಾಗಿದ್ದು ಸಂತೋಷ್ ಎಂಬಾತ ಸಿಕ್ಕಿಬಿದ್ದಿದ್ದಾನೆ.
ಈ ವೇಳೆ ತನ್ನನ್ನು ಹಿಡಿಯಲು ಬಂದ ಜನರ ಮೇಲೆ ಸಂತೋಷ್ ಡ್ರ್ಯಾಗರ್‍ನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಅಷ್ಟರಲ್ಲಿ ನಾಲ್ಕೈದು ಜನ ಸಂತೋಷನನ್ನ ಹಿಡಿದು ಕಂಬಕ್ಕೆ ಕಟ್ಟಿ, ಹಿಗ್ಗಾಮುಗ್ಗಾ ಥಳಿಸಿ ಮಡಿವಾಳ ಪೊಲೀಸರಿಗೆ ಒಪ್ಪಿಸಿದ್ದಾರೆ.
Comments are closed.