
ಮಂಗಳೂರು : ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈದ್-ಉಲ್ – ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಸಮಾರಂಭದಲ್ಲಿ ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ ಏಳನೇ ಸಿ ತರಗತಿಯ ವಿದ್ಯಾರ್ಥಿ ಮಾಸ್ಟರ್ ಅನೂಪ್ ರಾವ್ ಇವರನ್ನುಅಭಿನಂದಿಸಲಾಯಿತು. ಇವರು ಜುಲೈ 7ರಂದು ಜಪಾನಿನಲ್ಲಿ ನಡೆಯುವ ಏಷಿಯನ್ ಫೆಸಿಫಿಕ್ ಚಿಲ್ಡ್ರನ್ ಕನ್ವೆನ್ಶನ್ ನಲ್ಲಿ ಭಾರತವನ್ನು ಪ್ರತಿನಿಧಿಸುವ 6ಮಂದಿ ಭಾರತೀಯ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಭಾಗವಹಿಸಲಿದ್ದಾರೆ.

ಈ ಸುಂದರ ಸಮಾರಂಭದ ಮುಖ್ಯ ಅತಿಥಿಗಳಾದ ಶ್ರೀ ಇಷಾಕ್ ಸಖಾಫಿ ಮಾತನಾಡಿ ಶುಧ್ದತೆ ಕಡೆ ತಿರುಗುವಂತೆ ಕರೆ ನೀಡಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಶ್ರೀಯುತ ನಝೀರ್, ಮೂಡ ಕಮಿಷನರ್ ಮಾತನಾಡಿ ರಮ್ಜಾನ್ ಹಬ್ಬ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಶಾಲಾ ಸಂಚಾಲಕರಾದ ಫಾ.ಎರಿಕ್ ಮಥಾಯಸ್ ಅವರು ಮಾತನಾಡಿ ಎಲ್ಲರಿಗೂ ಹಬ್ಬದ ಶುಭಾಶಯ ಹಾರೈಸಿದರು. ಏಷ್ಯನ್ ಫೆಸಿಫಿಕ್ ಚಿಲ್ಡ್ರನ್ ಕನ್ವೆನ್ಶನ್ ನಲ್ಲಿ ಭಾಗವಹಿಸುವ ಅನೂಪ್ ಎ. ರಾವ್ ರವರನ್ನು ಸನ್ಮಾನಿಸಿದರು. ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಅನಿಲ್ ಕುಮಾರ್ ಹಾಗೂ ಶಾಲಾ ಉಪಮುಖ್ಯೋಪಾಧ್ಯಾಯರಾದ ಶ್ರೀ ಲಿಯಾ ಡಿಸೋಜ ರವರು ಉಪಸ್ಥಿತರಿದ್ದರು.
Comments are closed.