ರಾಷ್ಟ್ರೀಯ

ಸಾಮ್‌ಸುಂಗ್ ಸ್ಮಾರ್ಟ್‌ಫೋನ್‌ಗಳ ದಾಖಲೆಯ ಮಾರಾಟ

Pinterest LinkedIn Tumblr

samನವದೆಹಲಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಪ್ರಸಕ್ತ ಸಾಲಿನ ಎರಡನೇಯ ತ್ರೈಮಾಸಿಕ ಅವಧಿಯಲ್ಲಿ ದಕ್ಷಿಣ ಕೊರಿಯಾ ಮೂಲದ ದೈತ್ಯ ಸ್ಯಾಮ್‌ಸುಂಗ್ ಸಂಸ್ಥೆಯ ಒಟ್ಟು ನಿವ್ವಳ ಲಾಭದಲ್ಲಿ ಚೇತರಿಕೆ ಕಂಡಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ದಕ್ಷಿಣ ಕೊರಿಯಾದ ದೈತ್ಯ ಸ್ಯಾಮ್‌ಸುಂಗ್ ಸಂಸ್ಥೆ, ಎರಡನೇ ತ್ರೈಮಾಸಿಕ ಗಳಿಕೆಯ ಅಂದಾಜು ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ. ಕಳೆದ ಆರ್ಥಿಕ ವರ್ಷದ ಇದೆ ಅವಧಿಗೆ ಹೊಲಿಸಿದರೆ, ಪ್ರಸಕ್ತ ಸಾಲಿನ ಮೊಬೈಲ್ ವಿಭಾಗ ಕೊಡುಗೆಯಲ್ಲಿ 13 ಪ್ರತಿಶತ ಹೆಚ್ಚಳವಾಗಿದೆ ಎಂದು ತಿಳಿಸುತ್ತಿದೆ.

ಮಾರಾಟದಲ್ಲಿ ಮೊದಲಾರ್ಧದಲ್ಲಿ ನಿರೀಕ್ಷೆಗಿಂತ ಗೆಲಾಕ್ಸಿ ಎಸ್‌-7 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳ ಮಾರಾಟ ಪ್ರಕ್ರಿಯೆ ಉತ್ತಮವಾಗಿದ್ದು, ಅರೆವಾಹಕ ವ್ಯಾಪಾರವು ಸಹ ಪ್ರಗತಿ ಸಾಧಿಸಿದೆ ಎಂದು ಕೆಬಿಟಿ ಅಸೆಟ ಮ್ಯಾನೇಜ್‌ಮೆಂಟ್‌ನ ಲೀ ಜಿನ್‌-ಓ ಹೇಳಿದ್ದಾರೆ.

Comments are closed.