ಕರಾವಳಿ

ಕುಂದಾಪುರದಲ್ಲಿ ಸಂಭ್ರಮದ ಈದ್-ಉಲ್-ಫಿತರ್; ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ

Pinterest LinkedIn Tumblr

*ಯೋಗೀಶ್ ಕುಂಭಾಸಿ

ಕುಂದಾಪುರ: ಮುಸಲ್ಮಾನ ಬಾಂಧವರ ಪವಿತ್ರ ಹಬ್ಬವಾದ ರಂಜಾನ್ ತಿಂಗಳ ಈದ್-ಉಲ್-ಫಿತರ್ ಹಬ್ಬವನ್ನು ಸಂಭ್ರಮ ಹಾಗೂ ಸಡಗರದಿಂದ ಕುಂದಾಪುರದಲ್ಲಿ ಮುಸ್ಲಿಂ ಬಾಂಧವರು ಬುಧವಾರ ಬೆಳಿಗ್ಗೆ ಆಚರಿಸಿದರು.

Kundapura_EDulPhitar_Celebration (15) Kundapura_EDulPhitar_Celebration (18) Kundapura_EDulPhitar_Celebration (19) Kundapura_EDulPhitar_Celebration (12) Kundapura_EDulPhitar_Celebration (39) Kundapura_EDulPhitar_Celebration (37) Kundapura_EDulPhitar_Celebration (3) Kundapura_EDulPhitar_Celebration (1) Kundapura_EDulPhitar_Celebration (5) Kundapura_EDulPhitar_Celebration (4) Kundapura_EDulPhitar_Celebration (8) Kundapura_EDulPhitar_Celebration (38) Kundapura_EDulPhitar_Celebration (35) Kundapura_EDulPhitar_Celebration (20) Kundapura_EDulPhitar_Celebration (27) Kundapura_EDulPhitar_Celebration (26) Kundapura_EDulPhitar_Celebration (25) Kundapura_EDulPhitar_Celebration (24) Kundapura_EDulPhitar_Celebration (23) Kundapura_EDulPhitar_Celebration (22) Kundapura_EDulPhitar_Celebration (21) Kundapura_EDulPhitar_Celebration (29) Kundapura_EDulPhitar_Celebration (28) Kundapura_EDulPhitar_Celebration (31) Kundapura_EDulPhitar_Celebration (30) Kundapura_EDulPhitar_Celebration (33) Kundapura_EDulPhitar_Celebration (34) Kundapura_EDulPhitar_Celebration (32) Kundapura_EDulPhitar_Celebration (36) Kundapura_EDulPhitar_Celebration (17) Kundapura_EDulPhitar_Celebration (14) Kundapura_EDulPhitar_Celebration (13) Kundapura_EDulPhitar_Celebration (11) Kundapura_EDulPhitar_Celebration (10) Kundapura_EDulPhitar_Celebration (9) Kundapura_EDulPhitar_Celebration (7) Kundapura_EDulPhitar_Celebration (6) Kundapura_EDulPhitar_Celebration (2) Kundapura_EDulPhitar_Celebration (16)

ಕುಂದಾಪುರದ ಜಾಮೀಯಾ ಮಸೀದಿಯ ಖತೀಬರಾದ ಅಬ್ದುಲ್ ರಹೀಮ್ ಲತೀಫ್ ಅವರ ನೇತೃತ್ವದಲ್ಲಿ ಬೆಳಿಗ್ಗೆ ದುವಾ ಹಾಗೂ ನಮಾಜ್ ನಡೆಯಿತು. ಬಳಿಕ ಪರಸ್ಪರ ಆಲಂಗಿಸಿಕೊಂಡು ಶುಭಾಶಯವನ್ನು ವಿನಿಮಯ ಮಾಡಿಕೊಂಡ ಮುಸಲ್ಮಾನ ಬಾಂಧವರು ಈದ್ ಶುಭಾಶಯವನ್ನು ಹಂಚಿಕೊಂಡರು.

ಜಾಮೀಯಾ ಮಸೀದಿಯಿಂದ ಕುಂದಾಪುರದ ಪಾರಿಜಾತ ವೃತ್ತದ ಸಮೀಪವಿರುವ ಈದ್ಗಾ ಮೈದಾನದವರೆಗೂ ಬೃಹತ್ ಮೆರವಣಿಗೆ ಮೂಲಕ ಸಾಗಿ ಬಂದ ಮುಸಲ್ಮಾನ ಬಾಂದವರು ಸಾಮೂಹಿಕ ಪ್ರಾರ್ಥನೆ (ದುವಾ) ಮಾಡಿದರು. ಅರಬ್ಬೀ ಶೈಲಿ ಉಡುಗೆಗಳನ್ನು ತೊಟ್ಟ ಪುಟಾಣಿ ಮಕ್ಕಳು ಮೆರವಣಿಗೆಯಲ್ಲಿ ಎಲ್ಲರನ್ನೂ ಆಕರ್ಷಿಸಿದರು.

ಇದೇ ಸಂದರ್ಭ ಕುಂದಾಪುರ ನಗರದಲ್ಲಿ ಹಾಗೂ ತಾಲೂಕಿನ ವಿವಿದೆಡೆಯಲ್ಲಿ ಶಾಂತಿಯುತವಾಗಿ ಹಬ್ಬವನ್ನು ಆಚರಿಸಲಾಯಿತು.

Comments are closed.