
ನಾಡಿನ ಸಮಸ್ತ ಮುಸ್ಲಿಂ ಭಾಂಧವರಿಗೆ ಕನ್ನಡಿಗ ವರ್ಲ್ಡ್ ಬಳಗದ ವತಿಯಿಂದ ಈದುಲ್ ಫಿತ್ರ್ ಹಬ್ಬದ ಶುಭಾಶಯಗಳು
ಮಂಗಳೂರು, ಜು.6: ಮುಸ್ಲಿಂ ಭಾಂಧವರ ಪ್ರೀತಿ ಮತ್ತು ಸಹೋದರತೆಯನ್ನು ಸಾರುವ ಪವಿತ್ರ ಹಬ್ಬ ‘ಈದುಲ್ ಫಿತ್ರ್ ’ ಅನ್ನು ಇಂದು ನಾಡಿನಾದ್ಯಂತ ಮುಸ್ಲಿಮರು ಸಡಗರ, ಸಂಭ್ರಮದಿಂದ ಆಚರಿಸಿದರು.
ಪವಿತ್ರ ರಮಝಾನ್ ತಿಂಗಳ ಉಪವಾಸ ಮಂಗಳವಾರ ಮುಸ್ಸಂಜೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಮರು ಮಂಗಳೂರಿನ ವಿವಿಧ ಮಸೀದಿಗಳಲ್ಲಿ ವಿಶೇಷ ನಮಾಝ್‌ನಲ್ಲಿ ಪಾಲ್ಗೊಂಡು ಬಳಿಕ ಸಡಗರ, ಸಂಭ್ರಮದಿಂದ ‘ಈದುಲ್ ಫಿತ್ರ್ ’ ಆಚರಿಸಿದರು.



ಮಂಗಳೂರಿನ ಬಾವುಟಗುಡ್ಡೆಯ ಈದ್ಗಾ ಮಸೀದಿಯಲ್ಲಿ ಬೆಳಗ್ಗೆ ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕ ಅಹ್ಮ ದ್ ಮುಸ್ಲಿಯಾರ್‌ರವರ ನೇತೃತ್ವ ದಲ್ಲಿ ನಮಾಝ್ ಮತ್ತು ಖುತ್ಬಾ ಪಾರಾಯಣ ನೆರವೇರಿತು. ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿ ಅಧ್ಯಕ್ಷ ಯೆನೆಪೊಯ ಅಬ್ದುಲ್ಲಾ ಕುಂಞಿ, ಸಚಿವ ಯು.ಟಿ.ಖಾದರ್, ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ರಾಜ್ಯ ವಕ್ಫ್ ಮಂಡಳಿ ಸದಸ್ಯ ಹಾಜಿ ಯೆನೆಪೊಯ ಮುಹಮ್ಮದ್ ಕುಂಞಿ, ದ.ಕ. ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಕೇಂದ್ರ ಜುಮಾ ಮಸೀದಿಯ ಖತೀಬ್ ಸದಕತುಲ್ಲಾ ಫೈಝಿ ಸಹಿತ ಪ್ರಮುಖ ಗಣ್ಯರು ಈದ್ಗಾ ಮೈದಾನದಲ್ಲಿ ನಡೆದ ಈದ್ ನಮಾಝ್‌ನಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಕಮಿಷನರ್ ಚಂದ್ರಶೇಖರ್, ವಿಎಚ್‌ಪಿ ಮುಖಂಡ ಎಂ.ಬಿ. ಪುರಾಣಿಕ್, ಶಾಸಕ ಜೆ.ರ್ ಲೋಬೊ, ಮಾಜಿ ಶಾಸಕ ಯೋಗೀಶ್ ಭಟ್, ಕಸಾಪ ಜಿಲ್ಲಾಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಮುಂತಾದವರು ಭಾಗವಹಿಸಿ ಮುಸ್ಲಿಂ ಭಾಂದವರಿಗೆ ಶುಭ ಹಾರೈಸಿದರು.

ಉಳ್ಳಾಲ ಕೇಂದ್ರ ಜುಮಾ ಮಸೀದಿ, ಮುಹಿಯುದ್ದೀನ್ ಜುಮಾ ಮಸೀದಿ ಬೊಳ್ಳೂರು,ಕೇಂದ್ರ ಶಾಫಿ ಜುಮಾ ಮಸೀದಿ ಮುಲ್ಕಿ,ಕದಿಕೆ ಕೆಂದ್ರ ಜುಮಾ ಮಸೀದಿ,ಮುಕ್ಕ ಜುಮಾ ಮಸೀದಿ, ಅಲ್ ಖುಬಾ ಜುಮಾ ಮಸೀದಿ ಕೊಲ್ನಾಡು,ಮುಲ್ಕಿ ಅಂಗರಗುಡ್ಡೆ ಜುಮಾ ಮಸೀದಿ,ತೋಕೂರು ಅನಫಿ ಜುಮಾ ಮಸೀದಿ ಪುತ್ತೂರು ಕೇಂದ್ರ ಜುಮಾ ಮಸೀದಿ,ಪುತ್ತೂರು ಬದ್ರಿಯಾ ಜುಮಾ ಮಸೀದಿ,ಬಪ್ಪಳಿಗೆ ಜುಮಾ ಮಸೀದಿ,ಸಂಪ್ಯ ಮುಹಿಯುದ್ದೀನ್ ಜುಮಾ ಮಸೀದಿ, ಸಂಟ್ಯಾರ್ ಜುಮಾ ಮಸೀದಿ,ಪುತ್ತೂರು ಎಪಿಎಂಸಿ ರಸ್ತೆಯಲ್ಲಿರುವ ಸಲಫಿ ಮಸೀದಿ, ನಿಮ್ರಾ ಜುಮಾ ಮಸೀದಿ ಮುಕ್ಕಚ್ಚೇರಿ,ಕೋಡಿಜಾಲ್ ರಿಫಾಯಿ ಜುಮಾ ಮಸ್ಜಿದ್, ತೊಕ್ಕೊಟ್ಟು ಮಸ್ಜಿದ್ ದಾರುಸ್ಸಲಾಮ್, ಅಜ್ಜಿನಡ್ಕ ಬೈತುಲ್ಲಾಹ್ ಸಲಫಿ ಮಸ್ಜಿದ್, ಅಜಿಲಮೊಗರು ಜುಮಾ ಮಸೀದಿ, ಪುತ್ತೂರು ಕೇಂದ್ರ ಜುಮಾ ಮಸೀದಿ, ಪುತ್ತೂರು ಬದ್ರಿಯಾ ಜುಮಾ ಮಸೀದಿ, ಸಾಲ್ಮರ ಸೈಯದ್ ಮಲೆ ಜುಮಾ ಮಸೀದಿ,ಕಲ್ಲೇಗ ಜುಮಾ ಮಸೀದಿ,ಬಪ್ಪಳಿಗೆ ಮಸ್ಜಿದುನ್ನೂರು ಜುಮಾ ಮಸೀದಿ, ಕೂರ್ನಡ್ಕ ಫೀರ್ ಮೊಹಲ್ಲಾ, ಪರ್ಲಡ್ಕ ಬದ್ರಿಯಾ ಜುಮಾ ಮಸೀದಿ, ಸಂಪ್ಯ ಮುಹಿಯುದ್ದೀನ್ ಜುಮಾ ಮಸೀದಿ, ಸಂಟ್ಯಾರು ಬದ್ರಿಯಾ ಜುಮಾ ಮಸೀದಿ, ಸಲಫಿ ಜುಮಾ ಮಸೀದಿ ಎಪಿಎಂಸಿ ರಸ್ತೆ, ಬದ್ರಿಯಾ ಜುಮಾ ಮಸೀದಿ ಬಂಟ್ವಾಳ ಕೆಳಗಿನಪೇಟೆ, ನೂರುದ್ದೀನ್ ಜುಮಾ ಮಸೀದಿ ಬೋಗೊಡಿ, ಮುಹಿಯುದ್ದೀನ್ ಜುಮಾ ಮಸೀದಿ ತುಂಬೆ, ಕಕ್ಕಿಂಜೆ ಜುಮಾ ಮಸೀದಿ ಸೇರಿದಂತೆ ದ.ಕ.ಜಿಲ್ಲೆಯ ಗ್ರಾಮಾಂತರದ ಬಹುತೇಕ ಮಸೀದಿಗಳಲ್ಲಿ ಇಂದು ಬೆಳಿಗ್ಗೆ ಈದ್ ನಮಾಝ್ ನಡೆಯಿತು.

ಪ್ರೀತಿ ಮತ್ತು ಸಹೋದರತೆಯನ್ನು ಸಾರುವ ಹಬ್ಬ
ಈದುಲ್ ಫಿತ್ರ್ ಪ್ರೀತಿ ಮತ್ತು ಸಹೋದರತೆಯನ್ನು ಸಾರುವ ಹಬ್ಬವಾಗಿದೆ. ಎಲ್ಲಾ ಧರ್ಮಿಯ ಸಹೋದರರ ನಡುವೆ ಪ್ರೀತಿ,ವಿಶ್ವಾಸ,ಭ್ರಾತೃತ್ವ ಸುದೃಢವಾಗಲು, ಸೌಹಾರ್ದತೆಯ ಪರಂಪರೆಯನ್ನು ಇನ್ನಷ್ಟು ಬಲಪಡಿಸಲು ಈದ್ ಎಲ್ಲರಿಗೂ ಪ್ರೇರಣೆಯಾಗಿದೆ.
ಇದು ಒಂದು ತಿಂಗಳ ಕಠಿಣ ಉಪವಾಸದ ಸಮಾರೋಪವಾಗಿದೆ ಈದುಲ್ ಫಿತ್ರ್. ಹಸಿವು-ದಾಹ, ಲೈಂಗಿಕ ಆಸಕ್ತಿ, ನಿದ್ದೆ ಇವೆಲ್ಲವುಗಳ ಮೇಲಿನ ನಿಯಂತ್ರಣ ಉಪವಾಸದ ಉದ್ದೇಶವಾಗಿದೆ. ಸ್ವಚ್ಛ ನಾಲಗೆ ಮತ್ತು ಸ್ವಚ್ಛ ಮನಸ್ಸು ಉಪವಾಸದ ಗುರಿಯಾಗಿದೆ. ವಿವೇಕ, ಸಹನೆ, ಉಪವಾಸದ ಪಾಠಗಳಾಗಿವೆ. ದುರ್ಬಲರ ಮತ್ತು ಹಕ್ಕು ವಂಚಿತರ ದುಃಖ ಮತ್ತು ಬವಣೆಗಳನ್ನು ಅರಿಯುವ ಸಂದರ್ಭವೂ ಆಗಿದೆ. ಒಂದು ತಿಂಗಳ ಉಪವಾಸದ ತರಬೇತಿಯ ಕೊನೆಯಲ್ಲಿ ಆಚರಿಸಲ್ಪಡುವ ಈದುಲ್ ಫಿತ್ರ್ ಬದುಕನ್ನು ಸುಧಾರಿಸಲು ಮತ್ತು ಕ್ರಮಬದ್ಧಗೊಳಿಸಲು ಪ್ರೇರಣೆಯಾಗಿದೆ.
Comments are closed.