ಮನೋರಂಜನೆ

ರೇಪಾದ ಮಹಿಳೆ ಕುರಿತ ಸಲ್ಮಾನ್‌ ಹೇಳಿಕೆ ದುರದೃಷ್ಟಕರ: ಆಮೀರ್‌ ಖಾನ್‌

Pinterest LinkedIn Tumblr

Aamir-Salman-700ಮುಂಬಯಿ : ರೇಪಾದ ಮಹಿಳೆ ಕುರಿತಾಗಿ ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ನೀಡಿರುವ ಹೇಳಿಕೆ ದುರದೃಷ್ಟಕರ ಹಾಗೂ ಸಂವೇದನಾರಹಿತವಾದುದೆಂದು ಸಲ್ಮಾನ್‌ ಗೆಳೆಯ ಹಾಗೂ ಬಾಲಿವುಡ್‌ನ‌ ಇನ್ನೋರ್ವ ಸೂಪರ್‌ ಸ್ಟಾರ್‌ ನಟ ಆಮೀರ್‌ ಖಾನ್‌ ಹೇಳಿದ್ದಾರೆ.

“ರೇಪಾದ ಮಹಿಳೆ ಕುರಿತಾಗಿ ಸಲ್ಮಾನ್‌ ಹೇಳಿಕೆ ನೀಡಿದಾಗ ನಾನು ಅಲ್ಲಿರಲಿಲ್ಲ. ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಯನ್ನು ನೋಡಿ ಹೇಳುವುದಾದರೆ, ಸಲ್ಮಾನ್‌ ಆ ರೀತಿ ಹೇಳಿರುವುದು ದುರದೃಷ್ಟಕರ ಮತ್ತು ಅದು ಸಂವೇದನಾರಹಿತವಾದುದು’ ಎಂದು ಪ್ರತಿಕ್ರಿಯೆ ಕೇಳಿದ ಮಾಧ್ಯಮದವರನ್ನು ಉದ್ದೇಶಿಸಿ ಆಮೀರ್‌ ಖಾನ್‌ ಹೇಳಿದರು.

ಈ ಬಗ್ಗೆ ಸಲ್ಮಾನ್‌ ಖಾನ್‌ ಅವರಿಗೆ ನೀವೇನಾದರೂ ಸಲಹೆ ಕೊಡಲು ಬಯಸುವಿರಾ ? ಎಂದು ಸುದ್ದಿಗಾರರು ಕೇಳಿದಾಗ, “ಸಲಹೆ ಕೊಡಲು ನಾನ್ಯಾರು?’ ಎಂದು ಮರು ಪ್ರಶ್ನೆ ಎಸೆದರು.

ಸಲ್ಮಾನ್‌ ಖಾನ್‌ ಅವರು ಮಹಿಳೆಯರನ್ನು ಹಗುರವಾಗಿ ಕಂಡು ನೀಡಿರುವ ಈ ಹೇಳಿಕೆಯ ಬಗ್ಗೆ ಸ್ಪಷ್ಟೀಕರಣ ನೀಡಿ ಕ್ಷಮೆ ಯಾಚಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗವು ಅವರಿಗೆ ನೊಟೀಸ್‌ ಜಾರಿ ಮಾಡಿತ್ತು. ಸಲ್ಮಾನ್‌ ಅವರು ತಮ್ಮ ವಕೀಲರ ಮೂಲಕ ಆ ನೊಟೀಸಿಗೆ ಉತ್ತರ ನೀಡಿದ್ದರಾದರೂ ಕ್ಷಮೆ ಯಾಚಿಸಿರಲಿಲ್ಲ.
-ಉದಯವಾಣಿ

Comments are closed.